ನಿದ್ರೆ ಬಂದರೆ ಚಹಾ ಸೇವಿಸಲು ಕೆಎಸ್ಸಾರ್ಟಿಸಿ ಚಾಲಕರಿಗೆ ಫ್ಲಾಸ್ಕ್ ಸಿಗಲಿದೆ.
ದೂರದ ಮಾರ್ಗದ ಬಸ್ ಚಾಲಕರಿಗೆ ವಿತರಣೆ ಮಾಡಲಾಗುತ್ತದೆ. ದೂರದ ಮಾರ್ಗಗಳಿಗೆ ಹಾಗೂ ರಾತ್ರಿ ವೇಳೆಯಲ್ಲಿ
ಬಸ್ ಚಾಲನೆ ಮಾಡುವ ಕೆಎಸ್ಸಾರ್ಟಿಸಿ ಚಾಲಕರ ಅನುಕೂಲಕ್ಕಾಗಿ ನಿಗಮದಿಂದ ಥರ್ಮಲ್ ಪ್ಲಾಸ್ಟ್ ನೀಡಲಾಗುತ್ತಿದೆ. ರಾತ್ರಿ ವೇಳೆ ಬಸ್ ಚಾಲನೆ ಮಾಡುವ ಚಾಲಕರು ನಿದ್ದೆಯ ಮಂಪರಿಗೆ ಜಾರದಂತೆ ಚಹಾ ಅಥವಾ ಕಾಫಿ ಕುಡಿದು ರಿಫ್ರೆಶ್ ಆಗಲು ಫ್ಲಾಸ್‌ಗಳನ್ನು ವಿತರಿಸಲಾಗುತ್ತಿದೆ.

 

ಬೆಂಗಳೂರು:
ಅಪಘಾತರಹಿತ ಚಾಲನೆಗೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ರಾತ್ರಿ ವೇಳೆ ಬಸ್ ಚಾಲನೆ ಮಾಡುವ 1600 ಚಾಲಕರಿಗೆ ಥರ್ಮೋ ಫ್ಲಾಸ್ಕ್ ವಿತರಿಸಿದೆ.

ಬೆಳಗಿನ ಜಾವದ ವೇಳೆ ಕಾಫಿ, ಟೀ ಸೇವನೆಗೆ ಅನುಕೂಲವಾಗುವಂತೆ ಅರ್ಧ ಲೀಟರ್ ಸಾಮರ್ಥ್ಯದ ಥರ್ಮೋ ಫ್ಲಾಸ್ಕ್ ನೀಡಲಾಗಿದೆ.

ಬೆಳಗಿನ ಜಾವ 3 ರಿಂದ 4 ಗಂಟೆಯ ಸಮಯದಲ್ಲಿ ಹೆಚ್ಚು ಅಪಘಾತ ಸಂಭವಿಸಿರುವುದು ಇತ್ತೀಚೆಗೆ ನಡೆಸಲಾದ ಅಧ್ಯಯನದಲ್ಲಿ ಗೊತ್ತಾಗಿದೆ. ಹೀಗಾಗಿ ಈ ಸಮಯದಲ್ಲಿ ಕಾಫಿ ಅಥವಾ ಟೀ ಸೇವಿಸುವುದರಿಂದ ನಿದ್ದೆ ಮಂಪರಿನಿಂದ ದೂರಾಗಿಸಿ ಪ್ರಯಾಣಿಕರಿಗೆ ಸುರಕ್ಷಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಚಾಲಕರಿಗೆ ಈ ಫ್ಲಾಸ್ಕ್ ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.