ಬೆಳಗಾವಿ :
ಸಿಎಂ ಸಿದ್ದರಾಮಯ್ಯ ಕೊನೆಗೂ ಹೊಸ ಜಿಲ್ಲೆಗಳ ರಚನೆಯ ಘೋಷಣೆ ಮಾಡಲೇ ಇಲ್ಲ.

ರಾಜ್ಯದ ಅತಿ ದೊಡ್ಡ ಜಿಲ್ಲೆಗಳಾದ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳ ಘೋಷಣೆ ಮಾಡುತ್ತಾರೆ ಎಂಬ ಆಶಾಭಾವ ಮೂಡಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸಹಾ ಹೊಸ ಜಿಲ್ಲಾ ರಚನೆಯ ಕನಸನ್ನು ಕೊನೆಗೂ ಈಡೇರಿಸಲೇ ಇಲ್ಲ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಗೋಕಾಕ, ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ ಜಿಲ್ಲೆಗಳ ರಚನೆ ಮಾಡುತ್ತಾರೆ ಎಂಬ ಬಗ್ಗೆ ಭಾರಿ ಚರ್ಚೆ ಹರಡಿತ್ತು.

ಚಿಕ್ಕೋಡಿ, ಗೋಕಾಕ ಜಿಲ್ಲೆ ರಚನೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಸಿದ್ದರಾಮಯ್ಯ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದು ಯಾಕೆ ? ಹೊಸ ಜಿಲ್ಲೆಗಳ ರಚನೆಯ ಘೋಷಣೆ ಮಾಡದೇ ಇರುವ ರಹಸ್ಯ ಮಾತ್ರ ನಿಗೂಢವಾಗಿದೆ. ಇಲ್ಲಿನ ಜನತೆ ಹಾಗೂ ಸಂಘಟನೆಗಳು ಇನ್ನೆಷ್ಟು ಕಾಲ ಕಾಯಬೇಕು, ಹೋರಾಟ ಮಾಡಬೇಕು ಎಂಬುದು ಆಯಾ ಭಾಗದ ಜನರ ಅಭಿಪ್ರಾಯವಾಗಿದೆ.