ಆರ್ಡಿ :
ಕುಡುಬಿ ಹೋಳಿ ಕೂಡುಕಟ್ಟುಗಳಲ್ಲಿ ಸಾಂಪ್ರದಾಯಿಕ ರಂಗು
ರಂಗಿನ ಹೋಳಿ ಹಬ್ಬದ ಆಚರಣೆ ಮಾ 21 ನೇ ಗುರುವಾರದಿಂದ
ಆರಂಭಗೊಂಡಿದೆ. ಮಾ 25 ನೇ ಸೋಮವಾರದ ತನಕ ನಡೆಯಲಿದೆ.
ಜನರಲ್ಲಿ ಆಧುನಿಕತೆಯ ಪ್ರಭಾವ ಹೆಚ್ಚಿದಂತೆ ಹಬ್ಬ ಹರಿದಿನಗಳ
ಆಚರಣೆ,ಸಂಪ್ರದಾಯಗಳಲ್ಲಿ ಬಹಳಷ್ಟು
ಬದಲಾವಣೆಗಳಾಗುತ್ತಿವೆ, ಧಾರ್ಮಿಕ ಆಚರಣೆಗಳು, ಜನಪದ ಹಾಡುಗಳು, ಕಲೆಗಳು.ಧಾರ್ಮಿಕ ಆಚರಣೆಯ ಮೂಲ ಸಂಸ್ಕೃತಿ
ಕಣ್ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಅವಿಭಜಿತ ದಕ್ಷಿಣ
ಕನ್ನಡ ,ಉಡುಪಿ ಜಿಲ್ಲೆಗಳಲ್ಲಿ ಕುಡುಬಿ ಜನಾಂಗದವರ ಜೀವನ ಶೈಲಿಯೊಂದಿಗೆ ಕುಡುಬಿ ಜನರ ಹಬ್ಬ,ಆಚರಣೆಗಳು,ಸಂಪ್ರದಾಯ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿವೆ. ಇವರು ಅಚರಿಸುವ
ಹೋಳಿ ಕುಣಿತ ಒಂದು ವಿಶಿಷ್ಟ ಪ್ರಕಾರದ ಜನಪದ ಕಲೆ, ಭಕ್ತಿ
ಪ್ರಧಾನವಾಗಿ ಆಚರಿಸಲ್ಪಡುವ ಹೋಳಿ ಹಬ್ಬ ಕುತೂಹಲಕಾರಿ ಹಾಗೂ ಜನಾಕರ್ಷಣಿಯವಾಗಿದೆ.
ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡುಬಿ
ಸಮುದಾಯದವರು
ಕೊಕ್ಕರ್ಣೆ,ಒಳಬೈಲು,ಮುದ್ದೂರು,ಮಂದಾರ್ತಿ,
ಶಿರೂರು ಮೂರುಕೈ, ಯಡ್ತಾಡಿ,
ನಂಚಾರು,ಗೋಳಿಯಂಗಡಿ,ಹೆಂಗವಳ್ಳಿ, ಹಾಲಾಡಿ, ಬೆಳ್ವೆ,ಸೆಟ್ಟೋಳಿ,
ಶೇಡಿಮನೆ ,ಹೆಬ್ರಿ, ಬೇಳಂಜೆ,ಆರ್ಡಿ,ಅಲ್ಬಾಡಿ, ಕಲ್ಮರ್ಗಿ ಸೇರಿದಂತೆ ಸುತ್ತ
ಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಉಡುಪಿ
ಜಿಲ್ಲೆಯಲ್ಲಿ ಒಟ್ಟು 46 ಕುಡುಬಿ ಹೋಳಿ ಕೂಡುಕಟ್ಟುಗಳಿವೆ.ಈ ಸಲ 44
ಹೋಳಿ ಕೂಡುಕಟ್ಟು ತಂಡದವರು ಹೋಳಿ ಆಚರಣೆಯಲ್ಲಿ
ತೊಡಗಿಸಿಕೊಂಡಿದ್ದಾರೆ. ಎರಡು ಹೋಳಿ ಕೂಡುಕಟ್ಟುಗಳ
ತಂಡದವರು ಕಾರಣಾಂತರದಿಂದ ಪಾಲ್ಗೊಂಡಿಲ್ಲ, ಬುಡಕಟ್ಟು
ಸಂಸ್ಕೃತಿಯ ಹಲವಾರು ಸಂಪ್ರಾದಾಯಿಕ ಆಚರಣೆಗಳನ್ನು
ಆಚರಿಸುವ ಕುಡುಬಿ ಸಮುದಾಯದವರು ವರ್ಷಕ್ಕೊಮ್ಮೆ ಐದು
ದಿನಗಳ ಕಾಲ ಆಚರಿಸುವ ಈ ಹಬ್ಬದ ಪೂರ್ವ ತಯಾರಿ,ವಿಧಿ ವಿಧಾನಗಳು
ಹಾಗೂ ಹೋಳಿ ಹಬ್ಬದ ಆಚರಣೆಯ ಮುಕ್ತಾಯ ಬಹು
ಸೋಜಿಗ,ಧಾರ್ಮಿಕ ಹಿನ್ನಲೆಯಲ್ಲಿ ನಡೆಸುವ ಈ ಆಚರಣೆಗೆ ಭಕ್ತಿ
ಲೇಪನದ ಕಾರಣದಿಂದಲೂ ಏನೋ? ಇಂದಿಗೂ ಈ ಕಲೆ ತಲೆ
ತಲಾಂತರದಿಂದಲೂ ಆಚರಿಸಿಕೊಂಡು ಬಂದಿರುವ ಹೋಳಿಹಬ್ಬವನ್ನು ಹಿಂದಿ
ನ ಸಂಪ್ರದಾಯಗಳೊಂದಿಗೆ ಶಿಸ್ತು ಬದ್ಧವಾಗಿ ಆಚರಿಸುತ್ತಿರುವುದು
ಜನರ ಪ್ರಶಂಸೆಗೆ ಪಾತ್ರವಾಗಿದೆ.