ಬೆಳಗಾವಿ : ಘಟಪ್ರಭಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕಿ ಕಾಲು ಜಾರಿ ಬಿದ್ದು ನದಿ ಪಾಲಾದ ಘಟನೆ ಗೋಕಾಕನಲ್ಲಿ ನಡೆದಿದೆ.

ಘಟಪ್ರಭಾ ನದಿಯಲ್ಲಿ 12 ವರ್ಷದ ವೈಭವಿ ಪ್ರದೀಪ್ ಗಡಕರಿ ಮುಳುಗಿ ಮೃತಪಟ್ಟಿದ್ದು ತನ್ನ ಚಿಕ್ಕಪ್ಪನೊಂದಿಗೆ ನದಿಗೆ ತೆರಳಿದ್ದಳು. ಸ್ನಾನವಾದ ನಂತರ ಬಟ್ಟೆ ತೊಳೆಯಲು ನದಿಗೆ ಇಳಿದಾಗ ಕಾಲು ಜಾರಿ ನದಿ ಪಾಲಾಗಿದ್ದಾಳೆ. ನಂತರ ನುರಿತ ಈಜು ಪಟುಗಳು ಆಗಮಿಸಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.