ಅಯೋಧ್ಯೆ :
ಅಯೋಧ್ಯೆ ರಾಮಮಂದಿರದ ಗರ್ಭಗುಡಿಗೆ ನಿರ್ಮಾಣ ಮಾಡಲಾಗಿರುವ ಚಿನ್ನದ ಲೇಪಿತ ಬಾಗಿಲುಗಳ ಮೊದಲ ಫೋಟೋ ಈಗ ಭಾರಿ ವೈರಲ್ ಆಗಿದೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ದೇವಾಲಯದ ಗರ್ಭಗುಡಿ ಪೂರ್ಣಗೊಂಡಿದ್ದು, ಶಂಕುಸ್ಥಾಪನೆ ಸಮಾರಂಭಕ್ಕಾಗಿ ಕಾಯುತ್ತಿದೆ ಎಂದು ಘೋಷಿಸಿದೆ. 500 ವರ್ಷಗಳ ತಪಸ್ಸಿನ ಪರಾಕಾಷ್ಠೆ. ಪ್ರಭು ಶ್ರೀ ರಾಮಲಲ್ಲಾ ಅವರ ಪವಿತ್ರ ಗರ್ಭಗೃಹವು ಪ್ರಪಂಚದಾದ್ಯಂತ ಲಕ್ಷಾಂತರ ರಾಮಭಕ್ತರ ಆರಾಧ್ಯವನ್ನು ಸ್ವಾಗತಿಸಲು ತನ್ನ ಎಲ್ಲಾ ವೈಭವದಲ್ಲಿ ಸಿದ್ಧವಾಗಿದೆ ಎಂದು ಟ್ರಸ್ಟ್ ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ

ರಾಮ ಮಂದಿರದ ಗರ್ಭಗೃಹದ 11ನೇ ಸ್ವರ್ಣ ದ್ವಾರ, ಮಂದಿರದಲ್ಲಿ ಒಟ್ಟು 13 ಇದೇ ರೀತಿಯ ಬಾಗಿಲುಗಳು ಇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಖಚಿತಪಡಿಸಿದೆ.

ದೇವಾಲಯದ ಗರ್ಭಗುಡಿ ಅಥವಾ ಗರ್ಭಗೃಹದಲ್ಲಿ ಭಾರವಾದ ಚಿನ್ನದ ಲೇಪಿತ ಬಾಗಿಲುಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ದೇವರ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುತ್ತದೆ. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಬಾಗಿಲನ್ನು ಮಾಡಿದ್ದಾರೆ.

ಗರ್ಭಗೃಹದ ಎದುರು ಇರುವ ಗುರು ಮಂಟಪಕ್ಕೆ ಹಾಕಲಾಗಿರುವ ಚಿನ್ನದ ದ್ವಾರ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ವೈರಲ್ ಆದ ಬೆನ್ನಲ್ಲಿಯೇ ರಾಮ ಭಕ್ತರು ದ್ವಾರದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಪ್ರಾಣಪತ್ರಿಷ್ಠಾಪನೆಗಾಗಿ ಕಾಯುತ್ತಿರುವ ಶ್ರೀ ರಾಮ ಮಂದಿರದಲ್ಲಿ ಚಿನ್ನದ ಬಾಗಿಲುಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಮೊದಲ ಚಿನ್ನದ ಬಾಗಿಲಿನ ಮೊದಲ ಚಿತ್ರ ಬಹಿರಂಗಗೊಂಡಿದೆ. ಈ ದ್ವಾರ ರಾಮ್ ಲಾಲಾ ಅವರ ಗರ್ಭಗುಡಿಯ ಮುಖ್ಯ ಪ್ರವೇಶದ್ವಾರವಾಗಿದೆ.

ಮುಂದಿನ ಮೂರು ದಿನಗಳಲ್ಲಿ ಅಂತಹ ಇನ್ನೂ 13 ಬಾಗಿಲುಗಳು ಸ್ಥಾಪನೆಯಾಗಲಿವೆ. ರಾಮ ಮಂದಿರದ ಈ ಮೊದಲ ಬಾಗಿಲು ಸಾವಿರ ಕೆ.ಜಿ. ಚಿನ್ನ ಲೇಪಿತವಾಗಿದೆ.

ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಕೆತ್ತಿದ ಬಾಗಿಲುಗಳನ್ನು ಸ್ಥಾಪಿಸಲಾಗುತ್ತಿದೆ. ಬಾಗಿಲುಗಳ ಮೇಲೆ ವಿಷ್ಣು ಕಮಲ, ವೈಭವದ ಸಂಕೇತವಾದ ಗಜ ಅಂದರೆ ಆನೆ, ಶುಭಾಶಯ ಭಂಗಿಯಲ್ಲಿರುವ ದೇವಿಯ ಚಿತ್ರವನ್ನು ಕೆತ್ತಲಾಗಿದೆ. ಶ್ರೀ ರಾಮ ದೇವಾಲಯದ ಬಾಗಿಲುಗಳನ್ನು ಪ್ರಾಚೀನ ತೇಗದ ಮರಗಳಿಂದ ನಿರ್ಮಿಸಲಾಗಿದೆ. ಸೋಮವಾರ ಮಧ್ಯಾಹ್ನ 3.22 ಕ್ಕೆ ಮೊದಲ ಬಾಗಿಲನ್ನು ಸ್ಥಾಪಿಸಲಾಗಿದೆ. ಎಲ್ಲಾ ಬಾಗಿಲುಗಳನ್ನು ಈ ವಾರ ಸ್ಥಾಪಿಸಲಾಗುವುದು.

ರಾಮ ಲಲ್ಲಾಗೆ ಬೆಳ್ಳಿ ಸಿಂಹಾಸನ
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಕಚೇರಿಯ ಉಸ್ತುವಾರಿ ಪ್ರಕಾಶ್ ಗುಪ್ತಾ ಇತ್ತೀಚೆಗೆ ಈ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದರು. ರಾಮಲಲ್ಲಾ ದೇವಾಲಯ 44 ಬಾಗಿಲುಗಳನ್ನು ಹೊಂದಿರುತ್ತದೆ. ಅದರಲ್ಲಿ 14 ಬಾಗಿಲುಗಳು ಚಿನ್ನದಿಂದ ಲೇಪನ ಹೊಂದಿರುವಂಥದ್ದ ಎಂದು ಹೇಳಿದ್ದರು. ಇದರೊಂದಿಗೆ 30 ಬಾಗಿಲುಗಳನ್ನು ಬೆಳ್ಳಿಯಿಂದ ಲೇಪಿಸಲಾಗುವುದು/ ಭಗವಾನ್ ರಾಮಲಾಲಾ ಸಿಂಹಾಸನವನ್ನು ಸಹ ಬೆಳ್ಳಿಯಿಂದ ಲೇಪಿಸಲಾಗುವುದು. ಭಗವಾನ್ ರಾಮಲಾಲಾ ಕುಳಿತುಕೊಳ್ಳುವ ಸ್ಥಳದಲ್ಲಿ, ಆ ಸಿಂಹಾಸನವನ್ನು ಬೆಳ್ಳಿ ಪದರದಿಂದ ಮಾಡಲಾಗಿದೆ ಎಂದು ಹೇಳಿದ್ದರು.

ಭಕ್ತರು ಭಗವಾನ್ ರಾಮ್ ಲಾಲಾವನ್ನು ನೋಡಿದಾಗ, ಅವರು ದೂರದಿಂದ ಭಗವಾನ್ ರಾಮ್ ಲಾಲಾ ಅವರ ಅದ್ಭುತ ನೋಟವನ್ನು ಪಡೆಯುತ್ತಾರೆ, ಈ ರೀತಿಯಾಗಿ ಭಗವಾನ್ ರಾಮ್ ಲಾಲಾ ಸಿಂಹಾಸನವನ್ನು ಮಾಡಲಾಗಿದೆ. ದೇವಾಲಯದ ನಿರ್ಮಾಣ ಕಾರ್ಯದಲ್ಲಿ, ಗರ್ಭಗುಡಿ ಸಂಪೂರ್ಣವಾಗಿ ಪೂರ್ಣಗೊಂಡಿದೆ ಮತ್ತು ಮೊದಲ ಮಹಡಿಯಲ್ಲಿ 80% ರಷ್ಟು ಕೆಲಸ ಪೂರ್ಣಗೊಂಡಿದೆ.

ಹಿಂದೂಗಳ ಬಹುಬೇಡಿಕೆಯಂತೆ ನಿರ್ಮಾಣವಾಗುತ್ತಿರುವ ಈ ರಾಮ ಮಂದಿರ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ನಾಗರ ಶೈಲಿಯ ಈ ದೇವಸ್ಥಾನಕ್ಕೆ ಒಂಚೂರು ಕಬ್ಬಿಣ ಬಳಸಿಲ್ಲ. ಒಟ್ಟು 71 ಎಕರೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.

ಒಟ್ಟಾರೆಯಾಗಿ 71 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಭವ್ಯವಾದ ದೇವಾಲಯದ ಸಂಕೀರ್ಣವನ್ನು ಒಟ್ಟು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಗರ್ಭಗುಡಿ ಮತ್ತು ಗುಣ ಮಂಟಪ, ರಂಗ ಮಂಟಪ, ನೃತ್ಯ ಮಂಟಪ, ಕೀರ್ತನೆಯ ಮಂಟಪ, ಪ್ರಾರ್ಥನಾ ಮಂಟಪಗಳಿವೆ. ಮೂರು ಮಹಡಿಯ ಈ ದೇಗಲದ ಪ್ರತಿ ಮಹಡಿಯು 19.5 ಅಡಿ ಎತ್ತರವಿದೆ. ಒಟ್ಟಾರೆ ದೇವಾಲಯವು 161 ಅಡಿ ಎತ್ತರವಿದೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, ಮೂರು ಅಂತಸ್ತಿನ ದೇವಾಲಯವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ದೇವಸ್ಥಾನದ ನಿರ್ಮಾಣದಲ್ಲಿ ಎಲ್ಲಿಯೂ ಕಬ್ಬಿಣ ಬಳಸುತ್ತಿಲ್ಲ. ದೇವಾಲಯ ಪೂರ್ವದಿಂದ ಪಶ್ಚಿಮಕ್ಕೆ 380 ಅಡಿ ಉದ್ದವಿದ್ದು, 250 ಅಡಿ ಅಗಲವಿದೆ. 161 ಅಡಿ ಎತ್ತರವಿದೆ. ಸಂಕೀರ್ಣದಲ್ಲಿ ಒಟ್ಟು 392 ಕಂಬಗಳು 44 ಬಾಗಿಲುಗಳಿವೆ.