ಅಯೋಧ್ಯೆ :
ಅಯೋಧ್ಯೆಯ ರಾಮ ಮಂದಿರದ ರಾಮಲಲ್ಲಾನ ಗರ್ಭ ಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ.
ಜನವರಿ 22 ರಂದು ಪವಿತ್ರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಸಮಾರಂಭದಲ್ಲಿ ಸುಮಾರು 7,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
‘ಭಗವಾನ್ ಶ್ರೀ ರಾಮಲಲ್ಲಾ ಸರ್ಕಾರ್ ಅವರ ಗರ್ಭಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆಯೊಂದಿಗೆ, ನೆಲ ಮಹಡಿಯ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆಯ ಕಾರ್ಯವು ಪೂರ್ಣಗೊಂಡಿದೆ’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.
ದೇವಾಲಯದ ಚಿನ್ನ ಲೇಪಿತ ಬಾಗಿಲುಗಳ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾಗಿತ್ತು. ರಾಮನ ವಿಗ್ರಹವಿರುವ ದೇವಾಲಯದ ಗರ್ಭಗುಡಿ ಅಥವಾ ‘ಗರ್ಭ ಗೃಹ’ದ ಭಾರವಾದ ಚಿನ್ನ ಲೇಪಿತ ಬಾಗಿಲುಗಳ ಚಿತ್ರವನ್ನು ಟ್ರಸ್ಟ್ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿತ್ತು. ಎಲ್ಲಾ ಬಾಗಿಲುಗಳನ್ನು ಹೈದರಾಬಾದ್ ಮೂಲದ
ಕುಶಲಕರ್ಮಿಗಳು ಅದನ್ನು ಮಾಡಿದ್ದಾರೆ. ಭಗವಾನ್ ಶ್ರೀ ರಾಮಲಾಲಾ ಸರ್ಕಾರ್ ಅವರ ಗರ್ಭಗುಡಿಯಲ್ಲಿ ಚಿನ್ನದ ಲೇಪಿತ ಬಾಗಿಲು ಅಳವಡಿಸುವುದರೊಂದಿಗೆ, ನೆಲ ಮಹಡಿಯಲ್ಲಿ ಎಲ್ಲಾ 14 ಚಿನ್ನದ ಲೇಪಿತ ಬಾಗಿಲುಗಳ ಸ್ಥಾಪನೆಯ ಕಾರ್ಯ ಪೂರ್ಣಗೊಂಡಿದೆ.