ಬೆಂಗಳೂರು :
ವಿವಿಧ ಕಾರಣಕ್ಕೆ ಆಗಾಗ ಕಾಂಗ್ರೆಸ್ ಪಕ್ಷದ ಧೋರಣೆ ವಿರುದ್ಧ ಹರಿ ಹಾಯುತ್ತಿದ್ದ ಆಳಂದ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ ಅವರಿಗೆ ಇದೀಗ ಹೊಸ ಹುದ್ದೆ ಹುಡುಕಿಕೊಂಡು ಬಂದಿದೆ. ಅವರನ್ನು ಮುಖ್ಯಮಂತ್ರಿ ಅವರ ಸಲಹೆಗಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಈ ನಡುವೆ ಮಾಜಿ ಸಚಿವ, ಹಳಿಯಾಳದ ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ.
ಇಬ್ಬರಿಗೂ ಸಂಪುಟ ಸ್ಥಾನಮಾನವನ್ನು ಸಹಾ ನೀಡಲಾಗಿದೆ.