ಬೆಳಗಾವಿ :
ಸರ್ಕಾರದ ಸುತ್ತೋಲೆ ಸಂಖ್ಯೆ: ಕ್ರಸಂವಾ/89ಕೆಒಎಲ್ ರ ಪ್ರಕಾರ ಕನ್ನಡ ಅನುಷ್ಠಾನ ಕುರಿತು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಂಗಡಿ/ ಮುಂಗಟುಗಳು/ವಾಣಿಜ್ಯ ಸಂಕೀರ್ಣಗಳ ಪ್ರತಿದಿನ ವೀಕ್ಷಣೆ ಮಾಡಿ ತಮ್ಮ ತಮ್ಮ ಅಂಗಡಿಗಳ ನಾಮಫಲಕದಲ್ಲಿ ಶೆ. 60 ರಷ್ಟು ಕನ್ನಡ ಕಡ್ಡಾಯವಾಗಿ ಬಳಸಲು ಈಗಾಗಲೇ ದಿನಾಂಕ. 31/12/2023 ರಂದು ಪತ್ರಿಕಾ ಪ್ರಕಟಣೆ ನೀಡಲಾಗಿದೆ.

ಅಂಗಡಿಗಳಿಗೆ ಶೇ.60 ರಷ್ಟು ಕನ್ನಡವನ್ನು ಬಳಸುವಂತೆ ನೋಟಿಸ್ ಗಳನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೂ ಒಟ್ಟು 2050 ಅಂಗಡಿಗಳಿಗೆ ನೋಟಿಸ್ ಗಳನ್ನು ಜಾರಿ ಮಾಡಲಾಗಿರುತ್ತದೆ.

ಪ್ರತಿದಿನ ಆರೋಗ್ಯ ಅಧಿಕಾರಿಗಳ ತಂಡವು ಬೆಳಗಾವಿ ನಗರದಲ್ಲಿ ಸಂಚರಿಸಿ ಕನ್ನಡ ಅನುಷ್ಠಾನ ಕುರಿತು ವೀಕ್ಷಣೆ ಮಾಡಿ, ಶೇ 60 ರಷ್ಟು ಕಡ್ಡಾಯವಾಗಿ ಕನ್ನಡ ಹಾಗೂ ಬೆಳಗಾವಿ ಎಂದು ನಾಮಫಲಕದಲ್ಲಿ ಬಳಸಲು ಸೂಚಿಸಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ಪಾಲಿಸಿದಿದ್ದರೆ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿ ಅಂಗಡಿಯನ್ನು ಬಂದ್/ಸೀಲ್ ಮಾಡಲಾಗುವುದೆಂದು ಸೂಚಿಸಲಾಗಿದೆ.