ಬೆಳಗಾವಿ‌ :
ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಬೆಳಗ್ಗೆ ನಗರದಲ್ಲಿ ಸಂಚರಿಸಿ ಕಂಗ್ರಾಳಿಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು.

ಬೆಳಗ್ಗೆ ವಾಕಿಂಗ್‌ ಹೋಗುತ್ತಿದ್ದ ಜನ ಮೊದಲು ಆನೆಯನ್ನು ಕಂಡು ದಂಗಾದರು. ಈ ವಿಷಯ ನಗರದಲ್ಲಿ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಗಂಟೆಗಳ ಕಾಲ ನಗರದಲ್ಲಿ ಸುತ್ತಮುತ್ತ ಸಂಚರಿಸಿದ ಆನೆ ಉಚಗಾವಿ ಕಡೆ ಸಾಗಿತು. ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ವರ್ಷ ಚಿರತೆ ಪ್ರತ್ಯೇಕವಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡಿ ಓರ್ವನಿಗೆ ಗಾಯ ಮಾಡಿ‌ ಹೋಗಿತ್ತು. ಈಗ ಆನೆ ಕಂಡ ಜನರಲ್ಲಿ ಆತಂಕ ಎದುರಾಗಿದೆ.