ನವದೆಹಲಿ: ತಮಗೆ ನೀಡಲಾಗುತ್ತಿದ್ದ ಹಳೆ ಪಿಂಚಣಿ ಪದ್ಧತಿಯನ್ನು ಮರುಜಾರಿ ಮಾಡಬೇಕು. ಇಲ್ಲದಿದ್ದರೆ ಮೇ 1ರಿಂದ ರೈಲು ಸಂಚಾರ ನಿಲ್ಲಿಸುವುದಾಗಿ ಎಂದು ರೈಲ್ವೆ ನೌಕರರ ಒಕ್ಕೂಟ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಹಳೆ ಪಿಂಚಣಿ ಪದ್ಧತಿ ಜಾರಿ ಮಾಡುವಂತೆ ಹಲವು ಬಾರಿ ಎಲ್ಲ ಮಾರ್ಗದಲ್ಲಿಯೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈ ನಡುವೆ ಹಲವು ರಾಜ್ಯಗಳಲ್ಲಿ ಬಿಜೆಪಿಯ ವಿರೋಧಿ ಸರಕಾರಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದು ತಮ್ಮ ನೌಕರರ ಬೇಡಿಕೆಗೆ ಸ್ಪಂದಿಸಿರುವುದನ್ನು ಇಲ್ಲಿ ಗಮನಿಸಬಹುದು.