ಬೆಳಗಾವಿ :
ಅಥಣಿ ತಾಲೂಕು ಸಂಬರಗಿ ಗ್ರಾಮದಲ್ಲಿ ಸ್ಕೂಟಿಯ ಕೀ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕ ತನ್ನ ದೊಡ್ಡಮ್ಮಳಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದ ಘಟನೆ ವರದಿಯಾಗಿದೆ.

ಗಾಯಗೊಂಡ ಮಹಿಳೆಯನ್ನು ಮೀರಜ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿ ಆಗದೆ ಮೃತಪಟ್ಟಿದ್ದಾರೆ. ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕಬ್ಬಿಣದ ಸಲಾಕೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಗಲಾ ತುಕಾರಾಮ ಸಾವಡಕರ (55) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಘಟನೆಗೆ ನೇರ ಕಾರಣವಾಗಿರುವ ಆರೋಪಿ ಸಂಜಯ ರಾಜಾರಾಮ ಸಾವಡಕರ (25) ಎಂದು ಗುರುತಿಸಲಾಗಿದ್ದು, ಸಂಜಯ ತಾಯಿ ಮರಣ ಹೊಂದಿದ ನಂತರ ಅವನನ್ನು ದೊಡ್ಡಮ್ಮ ನೋಡಿಕೊಂಡಿದ್ದರು.

ಮಹಿಳೆ ಬಯಲು ಶೌಚಕ್ಕೆ ಹೋಗುವ ಮಾರ್ಗಮದ್ಯದಲ್ಲಿ ಹಲ್ಲೆ ಮಾಡಿದ ಆರೋಪಿ ಸಂಜಯ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದ. ನಂತರ ಮೃತ ಮಂಗಲಾ ಕಿರಿಚಾಟ ಕೇಳಿ ಕುಂಟುಂಬಸ್ಥರು ಹೋಗಿ ನೋಡಿದ್ದಾರೆ. ಸಂಜಯ ಅಲ್ಲಿಂದ ಪರಾರಿ ಆಗಿದ್ದ ಎಂದು ಪ್ರತ್ಯಕ್ಷದರ್ಶಿ ಮೃತ ಮಹಿಳೆಯ ಸೊಸೆ ಮಾಹಿತಿ ನೀಡಿದ್ದಾರೆ.

ನಂತರ ಹಲ್ಲೆಗೆ ಒಳಗಾದ ಮಂಗಲ ಅವರನ್ನು ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡ ಮೃತ ಮಂಗಲಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಲೆ ಮರೆಸಿಕೊಂಡಿದ್ದ ಆರೋಪಿ ಸಂಜಯನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.