ಬೆಳಗಾವಿ :
ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬುಧವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಯ ಜೀವನದ ಮೇಲೆ ಬರೆಯೆಳೆದಿದ್ದು ಸಾಕಾಗದೆ ಜಾನುವಾರಗಳ ಮೇಲ ಬರೆ ಎಳೆದಿರುವುದನ್ನು ನೋಡಿದರೆ ಕಾಂಗ್ರೆಸಿಗರಿಗೆ ಜಾನುವಾರುಗಳು ಸಹಾ ಹಿಡಿ ಶಾಪ ಹಾಕುತ್ತಿವೆ.
ಬಿಜೆಪಿ ನೇತೃತ್ವದಲ್ಲಿ ಬಿ.ಎಸ್.ಯಡಿಯುರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಂಡ ಫಲದಿಂದ ರಾಷ್ಟ್ರದಲ್ಲಿ ನಂದಿನಿ ಉತ್ಪಾದನೆ ಗಣನೀಯವಾಗಿ ಹೆಚ್ಚಳ ಕಂಡಿತು. ರಾಜ್ಯದ 26 ಲಕ್ಷಕ್ಕೂ ಅಧಿಕ ರೈತರು ಪ್ರತಿದಿನ 85 ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರು. ಗ್ರಾಹಕರು ನೆಮ್ಮದಿಯಿಂದ ಇದ್ದರು. ಆದರೆ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಬಂದನಂತರ 10 ತಿಂಗಳಲ್ಲಿ 716 ಕೋಟಿ ಹಣ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೀಡಿಲ್ಲ. ಗ್ರಾಹಕರಿಂದ ಪಡೆದ ದರ ಹೆಚ್ಚಳ ಹಣವು ರೈತರಿಗೆ ನೀಡಿಲ್ಲ. ಅಂದಾಜು ಪ್ರತಿ ದಿನ 10 ಲಕ್ಷ ಲೀಟರ್ ಹಾಲಿನ ಇಳುವರಿ ರಾಜ್ಯದಲ್ಲಿ ಕಡಿಮೆಯಾಗುತ್ತಿದೆ.
ಬರಗಾಲದಿಂದ ಬೇಸತ್ತ ರೈತರಿಗೆ ಸಹಕಾರ ನೀಡಬೇಕಾದ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ. ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಹಾಕುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇನ್ನೊಂದು ಕಡೆ ಪ್ರಧಾನ ಮಂತ್ರಿಗಳು ಕೊಡಮಾಡುವ ಕಿಸಾನ್ ಸಮ್ಮಾನ್ ಯೋಜನೆಗೆ ಬಿಜೆಪಿ ಸರ್ಕಾರ ನಿಡುತಿದ್ದ 4ಸಾವಿರ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿದ್ದಾರೆ. ರೈತರು ಜಮೀನಿನ ಮೇಲೆ ಪಡೆಯುವ ಸಾಲದ ಮೊತ್ತದ ಮೇಲೆ ದುಪ್ಪಟ್ಟು ಮುದ್ರಾಂಕ ಶುಲ್ಕ ಹೇರಿ ತಮ್ಮ ಪಾಪದ ಹಣ ಸಂಗ್ರಹಕ್ಕೆ ರೈತರ ಬೆನ್ನು ಮುರಿಯುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡುವದರೊಂದಿಗೆ,
ಹಾಲಿನ ಪ್ರೋತ್ಸಾಹ ಧನದ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸಲು,ಕೇಂದ್ರ ನಿಡುವ ಕಿಸಾನ್ ಸಮ್ಮಾನ್ 6ಸಾವಿರದ ಜೊತೆ ಸಂಕಷ್ಟದಲ್ಲಿರುವ ರೈತರಿಗೆ ವಾರ್ಷಿಕ 4ಸಾವಿರ ಪ್ರೋತ್ಸಾಹ ಹಣ ನೀಡುವಂತೆ ಮತ್ತು ಜಮಿನು ವಹಿವಾಟಿನ ಮೇಲೆ ದುಪ್ಪಟ್ಟು ಮುದ್ರಾಂಕ ಶುಲ್ಕವನ್ನು ಏರಿಸಿರುವದನ್ನು ಹಿಂಪಡೆಯಲು ಸೂಚಿಸುವುದಾಗಬೇಕೆಂದು ವಿನಂತಿಸಿದರು.
ಮಾನ ಮರ್ಯಾದೆ ಇಲ್ಲದ ದಪ್ಪ ಚರ್ಮದ ಈ ಕಾಂಗ್ರೆಸ್ ಸರ್ಕಾರ
ತಮ್ಮ ಸ್ವಾರ್ಥ ಸಾಧನೆಗೆ ರೈತರ ಹಾಗೂ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಇವರು ಮೊಂಡುತನ ಪ್ರದರ್ಶನ ಮಾಡಿದ್ದೆಯಾದರೆ ಜಾನುವಾರ ಸಮೇತ ರೈತರು ರಾಜ್ಯದಲ್ಲಿ ಉಗ್ರ ಪ್ರತಿಭಟಣೆ ಮಾಡಬೇಕಾದಿತು ಎಂದು ಎಚ್ಚರಿಕೆ ನೀಡಿದರು.