ಬೈಲಹೊಂಗಲ :
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಮಹಿಳೆಯನ್ನು ಅರಬೆತ್ತಲೆ ಮಾಡಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದೀಗ ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣದ ಸಂಬಂಧ ಪೊಲೀಸರು ಮಹಿಳೆಯನ್ನು ಗ್ರಾಮಕ್ಕೆ ಕರೆ ತಂದು ಸ್ಥಳದಲ್ಲಿ ತನಿಖೆ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ, ಪ್ರಕರಣ ಶುದ್ಧ ಸುಳ್ಳು. 20 ವರ್ಷಗಳ ಹಿಂದೆ ಮಾರಿದ ಜಮೀನಿನಲ್ಲಿ ಕಟ್ಟಿರುವ ಮನೆಗಳಿಗೆ ಪಂಚಾಯಿತಿಯವರು ರಸ್ತೆ, ನೀರು, ವಿದ್ಯುತ್ ಸೌಲಭ್ಯ ಒದಗಿಸಿಕೊಡಲು ಮುಂದಾದಾಗ ಅವರ ಮೇಲೆ ಸುಳ್ಳು ಆರೋಪ ದಾಖಲಾಗಿದೆ. ಮಹಿಳೆ ಮಾಡಿರುವ ಕೃತ್ಯ ತಿಗಡಿ ಗ್ರಾಮದಲ್ಲಿ ನಡೆದಿಲ್ಲ. ತಿಗಡಿ ಸ್ತ್ರೀಯನ್ನು ಪೂಜಿಸುವ ಹಾಗೂ ಗೌರವ ಕೊಡುವ ಗ್ರಾಮ. ಆದರೆ ಮಹಿಳೆ ಹಣದ ಆಸೆಯಿಂದ ಇಂತಹ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.