ದೆಹಲಿ :
ಕತಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಅಧಿಕಾರಿಗಳು ಕೊನೆಗೂ ಬಿಡುಗಡೆ ಭಾಗ್ಯ ಕಂಡಿದ್ದಾರೆ.

ಕತಾರ್ ತನ್ನ ವಶದಲ್ಲಿದ್ದ ಎಂಟು ಭಾರತೀಯ ಮಾಜಿ ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡಿದೆ; ಅವರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ.

ಈ ಅಧಿಕಾರಿಗಳು ಕಳೆದ ವರ್ಷ ಆಗಸ್ಟ್‌ನಿಂದ ಕತಾರ್‌ನಲ್ಲಿ ಜೈಲಿನಲ್ಲಿದ್ದರು. ಆದರೆ, ಅಪರಾಧ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ ಭಾರತ ಅಥವಾ ಕತಾರ್ ಅಧಿಕಾರಿಗಳು ಅವರ ವಿರುದ್ಧದ ಆರೋಪಗಳನ್ನು ಸಾರ್ವಜನಿಕವಾಗಿ ಮಾಡಲಿಲ್ಲ. ಎಂಟು ಭಾರತೀಯರನ್ನು ಬೇಹುಗಾರಿಕೆ ಆರೋಪದಡಿ ಬಂಧಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತಿವೆ.

ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳು ಕತಾರ್‌ನಿಂದ ಭಾರತಕ್ಕೆ ಮರಳಿದ್ದಾರೆ. ಕತಾರ್ ನ್ಯಾಯಾಲಯವು ಸೋಮವಾರ ತನ್ನ ವಶದಲ್ಲಿದ್ದ ಎಲ್ಲಾ 8 ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ 7 ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಈ ಹಿಂದೆ ಭಾರತದ ಮಧ್ಯಸ್ಥಿಕೆಯ ನಂತರ ಮರಣದಂಡನೆಯನ್ನು ದೀರ್ಘಾವಧಿಯ ಜೈಲು ಶಿಕ್ಷೆಗೆ ಪರಿವರ್ತಿಸಲಾಗಿತ್ತು.

ಈ ಹಿಂದೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಕತಾ‌ರ್ ನ್ಯಾಯಾಲಯದ ನಿರ್ಧಾರವನ್ನು ಎಂಇಎ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ವಾಗತಿಸಿದೆ.

ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಭಾರತಕ್ಕೆ ಮರಳಿದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ಇಲ್ಲದೆ ಅವರ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ‘ಭಾರತ್‌ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು. ಎಲ್ಲಾ ಮಾಜಿ ಅಧಿಕಾರಿಗಳು ಪ್ರಧಾನಿ ಮೋದಿ ಮತ್ತು ಕತಾರ್ ಎಮಿರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಳೆದ ವರ್ಷ ಅಕ್ಟೋಬರ್ 27 ರಂದು ಕತಾರ್ ನ್ಯಾಯಾಲಯವು ಎಂಟು ಮಾಜಿ ಭಾರತೀಯ ನೌಕಾಪಡೆಯ ಉದ್ಯೋಗಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು.

ನೌಕಾಪಡೆಯ ಉದ್ಯೋಗಿಗಳಿಗೆ ಮರಣದಂಡನೆ ವಿಧಿಸಿತ್ತು. ಈ ನಿರ್ಧಾರದಿಂದ ಭಾರತ ಅಚ್ಚರಿಗೊಂಡಿತ್ತು. ಅವರು ಈ ನಿರ್ಧಾರವನ್ನು ಆಘಾತಕಾರಿ ಎಂದು ಕರೆದರು.

ಈ ಎಂಟು ಭಾರತೀಯರು ಯಾರು?

ಕತಾರ್ ನ್ಯಾಯಾಲಯವು ಶಿಕ್ಷೆ ವಿಧಿಸಿದ ಎಂಟು ಜನರು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು.

1. ಕಮಾಂಡರ್ ಪೂರ್ಣೇಂದು ತಿವಾರಿ

2. ಕಮಾಂಡರ್ ಸುಗುಣಾಕರ್ ಪಾಕಳ

3. ಕಮಾಂಡರ್ ಅಮಿತ್ ನಾಗ್ದಾಲ್

4. ಕಮಾಂಡರ್ ಸಂಜೀವ್ ಗುಪ್ತಾ

5. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್

6. ಕ್ಯಾಪ್ಟನ್ ಬೀರೇಂದ್ರ ಕುಮಾ‌ರ್ ವರ್ಮಾ

7. ಕ್ಯಾಪ್ಟನ್ ಸೌರಭ್ ವಶಿಷ್ಠ

8. ನಾವಿಕ ರಾಗೇಶ್ ಗೋಪಕುಮಾ‌ರ್ ಎಲ್ಲಾ ಮಾಜಿ ಅಧಿಕಾರಿಗಳು ಭಾರತೀಯ ನೌಕಾಪಡೆಗೆ 20 ವರ್ಷಗಳ ವಿಶಿಷ್ಟ ಸೇವೆಯನ್ನು ನೀಡಿದ್ದಾರೆ. ಈ ಜನರು ತರಬೇತುದಾರರು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು.

2019 ರಲ್ಲಿ, ಕಮಾಂಡರ್ ಪೂರ್ಣೇಂದು ತಿವಾರಿ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಗೌರವವಾದ ಪ್ರವಾಸಿ ಭಾರತೀಯ ಸಮ್ಮಾನ್ ನೀಡಲಾಯಿತು. ಎಲ್ಲಾ ಎಂಟು ಭಾರತೀಯರು ಖಾಸಗಿ ಕಂಪನಿ ದಹರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು
ಕನ್ಸಲ್ವೆನ್ಸಿ ಸೇವೆಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತೀಯ ನಾಗರಿಕರು ಕಳೆದ ಕೆಲವು ವರ್ಷಗಳಿಂದ ಕತಾರ್‌ನ ನೌಕಾಪಡೆಗೆ ತರಬೇತಿ ನೀಡುತ್ತಿದ್ದರು.