ಬೆಳಗಾವಿ :
ದಿನಾಂಕ: 24/01/2024 ರಂದು ಜ್ಯೋತಿ ಜಗದೀಶ ಇಳಗೇರ ಸಾಃ ಪ್ಲಾಟ ನಂ.1205 ಝೇನಿತ್ ಅಪಾರ್ಟಮೆಂಟ್, 12ನೇ ಮಹಡಿ, ಲೋಟಸ್ ಕೌಂಟಿ ಮಂಡೋಳಿ ರೋಡ್, ಬೆಳಗಾವಿ ಇವರ ಮಾಲ್ಕಿ ಪ್ಲಾಟನಲ್ಲಿ ದಿನಾಂಕಃ 07/01/2024 ರಂದು ಸಾಯಂಕಾಲ 4.30 ಗಂಟೆಯಿಂದ ದಿನಾಂಕಃ 24/01/2024 ರಂದು ಬೆಳಿಗ್ಗೆ 7.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳಲು 77 ಗ್ರಾಂ ಬಂಗಾರದ ಆಭರಣ ಮತ್ತು 550 ಗ್ರಾಂ ಬೆಳ್ಳಿಯ ಆಭರಣ ಹೀಗೆ ಒಟ್ಟು ರೂ.4,12,500/- ಕಿಮ್ಮತ್ತಿನ ಮಾಲನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಫಿರ್ಯಾದಿ ನೀಡಿದ್ದರು.

ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆಃ 13/2024 ಕಲಂ 454,457, 380 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಸಂಬಂಧ ಆರೋಪಿ 1)ರಾಜು ಶ್ಯಾಮಸನ್ ಉಪ್ಪಲಪಾಟಿ(51) ಸಾಃ ಮೋನಕಪಾಳ ತಾಃಪೋದಲಿ ಜಿಃಪ್ರಕಾಶಂ ರಾಜ್ಯ: ಆಂಧ್ರಪ್ರದೇಶ ಹಾಲಿ ಬ್ರಹ್ಮಾನಂದ ಕಾಲೋನಿ ಗಣೇಶಪುರ ಬೆಳಗಾವಿ ಇತನಿಗೆ ದಿನಾಂಕ:01/02/2024 ರಂದು ದಸ್ತಗಿರ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇರುತ್ತದೆ.

ಆರೋಪಿತನಿಂದ 77 ಗ್ರಾಂ. ಬಂಗಾರದ ಆಭರಣ ಮತ್ತು 555 ಗ್ರಾಂ ಬೆಳ್ಳಿಯ ಆಭರಣ ಹಾಗೂ ಡಿಎಸ್ಎಲ್‌ಆರ್ ಕಂಪನಿಯ ಕ್ಯಾಮರಾ ಒಂದು ಹೀಗೆ ಒಟ್ಟು ರೂ. 5,12,500/- ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಸಿದ್ದರಾಮಪ್ಪ ಎಸ್.ಎನ್. ಪೋಲೀಸ್ ಆಯುಕ್ತರು, ಬೆಳಗಾವಿ ನಗರ ಇವರ ಮಾರ್ಗದರ್ಶನದಲ್ಲಿ ಪರಶುರಾಮ ಎಸ್. ಪೂಜೇರಿ ಪಿಐ ಟಿಳಕವಾಡಿ ಇವರ ನೇತ್ರತ್ವದಲ್ಲಿ ಆರೋಪಿತನ ಕಾರ್ಯಾಚರಣೆ ಕೈಕೊಂಡು, ಪ್ರಕರಣ ದಾಖಲಾದ ಒಂದು ವಾರದೊಳಗಾಗಿ ಆರೋಪಿತನಿಗೆ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.