ಬೆಳಗಾವಿ: ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮೇ.27ಕ್ಕೆ ಇಲ್ಲಿನ ಜೀರಗೆ ಸಭಾಂಗಣದಲ್ಲಿ ಜರುಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಎಲ್‌ಇ ಘಟಿಕೋತ್ಸವದ ಕಾರ್ಯಕ್ರಮಕ್ಕೆ ದೇಶದ ಉಪರಾಷ್ಪ್ರಪತಿ ಜಗದೀಪ್ ಧನಕರ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಕೆಎಲ್‌ಇ ಘಟಿಕೋತ್ಸವದ ಮೊದಲನೇ ಬಾರಿಗೆ ಅಮೇರಿಕಾದ ರಿಚರ್ಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ. ರಿಚರ್ಡ್ ಅವರು ಕೆಎಲ್‌ಇ ಸಂಸ್ಥೆಯ ಜೊತೆಗೆ ಸುಮಾರು 25 ವರ್ಷಗಳ ಕಾಲ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವತ್ತು ನಮ್ಮೊಂದಿಗೆ ಮಹಿಳಾ ಮತ್ತು ಮಕ್ಕಳಿಗೆ ಅನಿಮಿಯಾ ಆಗುವವರ ಮೇಲೆ ಸಂಶೋಧನೆ ಮಾಡಿ ಯಶಸ್ವಿಯಾಗಿದ್ದಾರೆ. ಜೂನ್ 1 ರಂದು ಭಾರತ ಸರಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ. ಅಂಥವರಿಗೆ ಡಾಕ್ಟರೇಟ್ ಪದವಿ ಕೊಡಮಾಡಲಾಗುತ್ತಿದೆ ಎಂದರು.
ಈ ಘಟಕೋತ್ಸವದಲ್ಲಿ ಸುಮಾರು 1739 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಇದರಲ್ಲಿ ಪಿಜಿ, ಮೇಡಿಕಲ್, ಪ್ಯಾರಾಮೇಡಿಕಲ್ ಸೇರಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಲಿದ್ದಾರೆ. ಇದರಲ್ಲಿ 45 ವಿದ್ಯಾರ್ಥಿಗಳು ಚಿನ್ನದ ಪದಕ, 30 ಜನ ಪಿಎಚ್‌ಡಿ,13 ಸೂಪರ್ ಸ್ಪೇಶಾಲಿಟಿ ಡಿಎಂಸಿಎಚ್, 644 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, 1029 ಡಿಗ್ರಿ ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಕೆಎಲ್‌ಇ ಡಿಮ್ ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಇದೆ. ಅವರು ಸ್ಥಾಪನೆ ಮಾಡಿದ 5 ವರ್ಷದ ಬಳಿಕ ಕೆಎಲ್‌ಇ ವಿಶ್ವವಿದ್ಯಾಲಯ ಪ್ರಾರಂಭ ಮಾಡಲಾಯಿತು. ಕಳೆದ 25 ವರ್ಷಗಳ ಹಿಂದೆ ಪ್ರಾರಂಭವಾಗಿರುವ ನಮ್ಮ ವಿವಿ ದೇಶಕ್ಕೆ ಹಾಗೂ ಜಗತ್ತಿಗೆ ಮಾದರಿಯಾಗಿದೆ ಎಂದರು.