ಕಾಗವಾಡ:

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಟ್ರ್ಯಾಕ್ಟ‌ರ್ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಶುಕ್ರವಾರ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ಮಲಕಾರಿ ರಾಯಪ್ಪ ಚೌಕಾ (32) ಮೃತ ಚಾಲಕ. ಕೆಂಪವಾಡದ ಅಥಣಿ ಫಾರ್ಮಸ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಇಳಿಸಿ ರಾಯಬಾಗದ ಕಡೆಗೆ ವಾಪಸ್ ಹೋಗುವಾಗ ಮೋಳೆ – ಐನಾಪುರ ಮಾರ್ಗದ ಐನಾಪುರ ಗ್ರಾಮದ ದಾದಾ ಜಂತೆನ್ನವರ ತೋಟದ ಬಳಿ ಅಪಘಾತ ಸಂಭವಿಸಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.