ಬೆಳಗಾವಿ :

ಶನಿವಾರ ತಡರಾತ್ರಿ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ನರಸಿಂಗಪುರ ಗ್ರಾಮದಲ್ಲಿ 6 ಕ್ಕೂ ಹೆಚ್ಚು ಮನೆ ಕಳ್ಳತನವಾಗಿದೆ.

ಕಳ್ಳರು ಲಕ್ಷಾಂತರ ರೂ. ಚಿನ್ನಾಭರಣ, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಅಂಬೇಡ್ಕರ್ ಗಲ್ಲಿ ಹಾಗೂ ಪಾಟೀಲ ಗಲ್ಲಿಯಲ್ಲಿ ಕಳ್ಳತನ ನಡೆದಿದೆ. ಯಾರು ಇಲ್ಲದ ಮನೆಗಳನ್ನೇ ಗುರುತಿಸಿ ಮಾಡಿ ಕಳ್ಳತನ ಮಾಡಲಾಗಿದೆ.
ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.