ಬೆಳಗಾವಿ :

ಬ್ಯಾರಿಕೇಡ್‌ಗಳನ್ನು ತಪ್ಪಿಸಲು ಟ್ರಕ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಾರುತಿ ನಗರದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಇಲ್ಲಿನ ಕೋಟೆ ಬಳಿಯ ಅಶೋಕ ಸ್ತಂಭದ ರಸ್ತೆಯಲ್ಲಿ ನಡೆದಿದೆ.

ಮಾರುತಿನಗರದ ಶ್ರೀಕಾಂತ ಸುರೇಶ ಹಂಪನ್ನವರ (32) ಮೃತ ಯುವಕ.
ಈತ ದ್ವಿಚಕ್ರವಾಹನದಲ್ಲಿ ಬೆಳಗಾವಿಗೆ ಬರುತ್ತಿದ್ದಾಗ ಗಾಂಧಿನಗರಕ್ಕೆ ಹೋಗುತ್ತಿದ್ದ ಟ್ರಕ್ ಚಾಲಕ ಮುಂದೆ ಇದ್ದ ಬ್ಯಾರಿಕೇಡ್ ತಪ್ಪಿಸಲು ಟ್ರಕ್ಕನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ.

ಟ್ರಕ್ ಚಾಲಕನ ವಿರುದ್ಧ ಸಂಚಾರಿ ಉತ್ತರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.