ಹೆಬ್ರಿ : ಮೂಲತಃ ಹೆಬ್ರಿ ತಾಲೂಕಿನ ಶಿವಪುರದವರಾದ ಪ್ರಖ್ಯಾತ ಹರಿದಾಸರಾದರು,ದಾಸ ಸಾಹಿತ್ಯದಲ್ಲಿ ಪಿ.ಹೆಚ್.ಡಿ ಮಾಡಿದವರು, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು ಮತ್ತು ದೇಶ ವಿದೇಶಗಳಲ್ಲಿ ಸಾವಿರಾರು ಹರಿಕಥೆಗಳನ್ನು ಮಾಡಿ ದಾಸ ಸಾಹಿತ್ಯವನ್ನು ಪ್ರಚಾರ ಮಾಡಿದ

ಡಾ.ಎಸ್.ಪಿ.ಗುರುದಾಸ (ಡಾ.ಶಿವಪುರ ಪದ್ಮನಾಭ ಗುರುದಾಸ)
ಕೊಡಿಯಾಲಬೈಲ್.ಮಂಗಳೂರು ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕವು ದಿನಾಂಕ 21-8-2024ರಂದು ಅಪರಾಹ್ನ 3 ಘಂಟೆಗೆ ಶಿವಪುರ ಪಾಂಡುಕಲ್ಲಿನ ಪಟ್ಟಾಭಿ ನಿಲಯದಲ್ಲಿ ಕ.ಸಾ.ಪ ಪೂರ್ವಾಧ್ಯಕ್ಷ ಬಿ. ಸಿ. ರಾವ್ ಶಿವಪುರ ಅವರ ಅಧ್ಯಕ್ಷತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಮಿತಿ ನೇತೃತ್ವದಲ್ಲಿ ನಡೆಯುವ ಶ್ರೀರಾಘವೇಂದ್ರ ಸ್ವಾಮಿಗಳ ಸುವರ್ಣ ಆರಾಧನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ.