ಹಾಸನ :
ಅವಳಿ ಸಹೋದರಿಯರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಹಾಸನದ ಈ ಹಿಂದಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಉಪ ನಿರ್ದೇಶಕ ವಿನೋದ ಚಂದ್ರ ಅವರ ಅವಳಿ ಪುತ್ರಿಯರು ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿಯು ಸಮಾನ ಅಂಕ ಪಡೆದಿದ್ದರು. ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲೂ ಸಮಾನ ಅಂಕ ಪಡೆದಿದ್ದಾರೆ.

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗಲೂ ಇಬ್ಬರೂ ಸಮಾನವಾಗಿ 625ಕ್ಕೆ 620 ಅಂಕ ಪಡೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿಯೂ ಸಮಾನ ಅಂಕ 571 (ಶೇ.95.17) ಗಳಿಸಿದ್ದಾರೆ. ಅವಳಿಗಳು ಒಂದೆ ಶಾಲೆಯಲ್ಲಿ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲಾ ಶಿಕ್ಷಣದಲ್ಲಿಯೂ ಅವರ ಅಂಕಗಳು ಒಂದೇ ಆಗಿರುತ್ತಿದ್ದವು.

ತಮ್ಮ ಪುತ್ರಿಯರ ಸಾಧನೆಯನ್ನು ತಂದೆ ವಿನೋದ ಚಂದ್ರ ಅವರು ನನ್ನ ಪ್ರೀತಿಯ ಅವಳಿ ಪುತ್ರಿಯರಾದ ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಸಮಾನ ಅಂಕ 571 (8.95.17) ಗಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗಲೂ ಇಬ್ಬರೂ ಸಮಾನವಾಗಿ 620 (99.20% ) ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದರು. ಆ ದೇವನಿಗೇಕೋ ಇಬ್ಬರಿಗೂ ಬೇಸರ ಮಾಡುವ ಮನಸಿದ್ದಂತಿಲ್ಲ ಎಂದು ಬರೆದು ಮಕ್ಕಳ ಅಂಕಪಟ್ಟಿ ಶೇರ್ ಮಾಡಿ ಆನಂದ ಪಟ್ಟಿದ್ದಾರೆ.