ಬೆಳಗಾವಿ :
ಹುಕ್ಕೇರಿ ತಾಲೂಕಿನ ಬೆನಕನಹೊಳಿ ಬಳಿ ಬಸ್ಸಿಗೆ ಕಲ್ಲು ಎಸೆದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪರಶುರಾಮ ನಾಯಿಕ ಹಾಗೂ ಬಸವರಾಜ ಶಿಂದೆ ಬಂಧಿತರು. ಗುರುವಾರ ಹುಕ್ಕೇರಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ಸಿಗೆ ಇವರಿಬ್ಬರು ಕಲ್ಲು ತೂರಿದ್ದರಿಂದ ವ್ಯಕ್ತಿಯೊಬ್ಬರಿಗೆ ಕಲ್ಲಿನೇಟು ತಗುಲಿತ್ತು.