ನವದೆಹಲಿ: ಇನ್ನೊಬ್ಬರು ಪ್ರಯಾಣಿಕರಿಗೆ ಬಿಗ್ ಶಾಕ್ ಉಂಟಾಗಿದೆ. ನೋಯ್ಡಾದಲ್ಲಿ ಉಬರ್ ಆಟೋ ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ 62 ರೂ. ಬದಲಾಗಿ ಭರ್ಜರಿ 7.66 ಕೋಟಿ ರು. ಬಿಲ್ ನೀಡಿದ ಘಟನೆ ನಡೆದಿದೆ. ದೀಪಕ್ ಎಂಬುವವರು ಟೆಂಗುರಿಯಾ ಅವರಿಗೆ ಈ ರೀತಿಯ ಅನುಭವವಾಗಿದೆ. ಉಬರ್ ಆಟೋ ಏರಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪಿದ ಬಳಿಕ ಅವರಿಗೆ ನಿರೀಕ್ಷಿತ 62 ರು. ಬದಲು 7.66 ಕೋಟಿ ರು.ಬಿಲ್ ಮೊತ್ತ ರವಾನೆಯಾಗಿದೆ. ಅದರಲ್ಲಿ ಚಾಲನಾ ಶುಲ್ಕ ₹1,67,74,647, ಕಾಯುವಿಕೆ ಶುಲ್ಕ ₹5,99,09,189 ಎಂದು ತೋರಿಸಲಾಗಿದೆ.
₹ 75 ಡಿಸೌಂಟ್ ನೀಡಲಾಗಿದೆ. ಈ ಬಗ್ಗೆ ಅವರು ದೂರು ನೀಡಿದ ಬಳಿಕ ಕಂಪನಿ ಕ್ಷಮೆಯಾಚಿಸಿದೆ.