ದುಬೈ:
10ನೇ ಆವೃತ್ತಿಯ ಅಂಡರ್-19 ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿ ಯಲ್ಲಿ ಭಾನುವಾರ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

8 ಬಾರಿ ಚಾಂಪಿಯನ್ ಭಾರತ ಹಾಗೂ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಪಾಕ್ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದು, ಜಯದ ಓಟ ಮುಂದುವರಿಸುವ ಕಾತರದಲ್ಲಿವೆ.

ಉದಯ್ ಪ್ರತಾಪ್ ನಾಯಕತ್ವದ ಭಾರತ ಆರಂಭಿಕ ಪಂದ್ಯದಲ್ಲಿ 2017ರ ಚಾಂಪಿಯನ್ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಭರ್ಜರಿ ಜಯಗಳಿಸಿತ್ತು. 2012ರಲ್ಲಿ ಭಾರತದ ಜೊತೆ ಜಂಟಿ ಚಾಂಪಿಯನ್ ಎನಿಸಿಕೊಂಡಿರುವ ಪಾಕ್ ಈ ಬಾರಿ ನೇಪಾಳ ವಿರುದ್ಧ ಜಯಗಳಿಸುವ ಮೂಲಕ ಟೂರ್ನಿಗೆ ಕಾಲಿರಿಸಿದೆ.