ಮುಂಬೈ :
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿರಿಯ ಸಹೋದರಿ ರಾಜೇಶ್ವರಿ ಬೆನ್ ಸೋಮವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಸಹೋದರಿ ನಿಧನದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಗುಜರಾತ್ ನಲ್ಲಿ ತಾವು ಭಾಗವಹಿಸಬೇಕಾಗಿದ್ದ ಎರಡು ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಿದ್ದಾರೆ. ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಹಲವು ತಿಂಗಳುಗಳ ಹಿಂದೆ ಶ್ವಾಸಕೋಶ ಕಸಿ ಮಾಡಲಾಗಿತ್ತು. ಆದ್ದರಿಂದ ಅಹಮದಾಬಾದ್ ನಿಂದ ಮುಂಬೈಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಇಂದು ಅವರು ನಿಧನರಾಗಿದ್ದಾರೆ.