ಬೆಳಗಾವಿ ಸುವರ್ಣ ಸೌಧ :
ಶೂನ್ಯ ವೇಳೆಯಲ್ಲಿ ಶಾಸಕ ಮರಿತಿಬ್ಬೇಗೌಡ ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಮ ಬೀರುತ್ತಿರುವ ಬಗ್ಗೆ , ಯು.ಬಿ. ವೆಂಕಟೇಶ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಮಾರಾಟ ಮತ್ತು ಕಳ್ಳತನ ಬಗ್ಗೆ , ಗೋವಿಂದರಾಜು ಅವರು ಕೋಲಾರ ಜಿಲ್ಲೆಯಲ್ಲಿ ನಡೆಯುತ್ರಿರುವ ಅಕ್ರಮ ಮದ್ಯ ಮಾರಾಟ ಪ್ರಕರಣಗಳ ಬಗ್ಗೆ, ನಾಗರಾಜ್ ಅವರು ಶಾಲಾ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಭೀತಿ ಮೂಡಿಸಿರುವ ಬಗ್ಗೆ, ಬಿ.ಎಸ್ .ಅರುಣ್ ಅವರು , ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿರುವ ಬಿದನೂರಿನ ಕೊಪ್ಪಲಮಠದಲ್ಲಿರುವ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳ ಒತ್ತುವರಿ ತೆರವು ಮತ್ತು ಅವುಗಳನ್ನು ಸಂರಕ್ಷಿಸುವ ಬಗ್ಗೆ, ಹನುಮಂತ ನಿರಾಣಿ ಅವರು ಬಾಗಲಕೋಟೆಯ ತೇರದಾಳದ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಬಗ್ಗೆ , ತಿಪ್ಪೇಸ್ವಾಮಿ ಅವರು ಡಯಾಲಿಸಿಸ್ ಸಿಬ್ಬಂದಿಗಳ ಪ್ರತಿಭಟನೆ ಬಗ್ಗೆ, ಬ್ರಿಜೇಶ್ ಕುಶಾಲಪ್ಪ ಅವರು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ಮಾತನಾಡಿದರು.