ಬೆಳಗಾವಿ: ಇಲ್ಲಿನ ಶಿವಬಸವನಗರದ ಕಾರಂಜಿ ಶ್ರೀಮಠದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಮಾ. 8 ರಂದು ಸಂಜೆ 6 ಗಂಟೆಗೆ ಮಹಾಶಿವರಾತ್ರಿ ನಿಮಿತ್ತ 272 ನೇ ಶಿವಾನುಭವ ಗೋಷ್ಠಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಶ್ರೀಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ನೂತನ ಉತ್ತರಾಧಿಕಾರಿಗಳಾದ ಪೂಜ್ಯ ಶಿವಯೋಗಿ ದೇವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ.

ಉತ್ತರ ಸೇವಾ ಸಂಘದ ಪ್ರಾಂತ ಕಾರ‍್ಯವಾಹ ರಾಘವೇಂದ್ರ ಕಾಗವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ‘ಪಂಚಾಕ್ಷರಿ ಮಂತ್ರ ಮಹಿಮೆ’ ವಿಷಯ ಕುರಿತು ವಿದ್ವಾಂಸ ಡಾ.ಬಸವರಾಜ ಜಗಜಂಪಿಯವರು ಉಪನ್ಯಾಸ ನೀಡಲಿದ್ದಾರೆ. ಸಂಗೀತ ವಿದೂಷಿ ಶೋಭಾ ಮಲ್ಲಿಕಾರ್ಜುನ ಜಾಬಿನ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನರ್ ಕರುಣಾ ಎಸ್. ಹಿರೇಮಠ ಅವರ ಸನ್ಮಾನ ಸಮಾರಂಭ ಜರುಗಲಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.