ಬೆಳಗಾವಿ :
ಬೆಳಗಾವಿಯ ಹಿರಿಯ ಪತ್ರಕರ್ತ ಅಶೋಕ ಜೋಶಿ ( ವ.72) ಇವರು ಇಂದು ಬುಧವಾರ ಬೆಳಿಗ್ಗೆ ಅನಾರೋಗ್ಯ ಕಾರಣ ನಿಧನರಾದರು.
ಅಶೋಕ ಜೋಶಿ ಅವರು ಸಂಯುಕ್ತ ಕರ್ನಾಟಕ, ಹಸಿರು ಕ್ರಾಂತಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು.
ಕಳೆದ ಒಂದು ವಾರದಿಂದ ಬಹು ಅಂಗಾಂಗಗಳ ವೈಫಲ್ಯ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ನಿಧನ ಹೊಂದಿದರು.
ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಅವರ ಸ್ವಗೃಹ ಸಾಯಿಸೃಷ್ಠಿ ಅಪಾರ್ಟ್‌ಮೆಂಟ್ ( ವ್ಯಾಕ್ಸಿನ್ ಡಿಪೋ ಹತ್ತಿರ) ನಿಂದ ಹೊರಟು ಚಿದಂಬರ ನಗರದ ರುದ್ರಭೂಮಿಯಲ್ಲಿ ನೆರವೇರಿತು.