ಬೆಂಗಳೂರು:
ರಾಮಮಂದಿರ ಉದ್ಘಾಟನಾ ದಿನದಂದು ರಜೆ ನೀಡಬೇಕು ಎಂದು ವಿರೋಧ ಪಕ್ಷದ ಒತ್ತಾಯ ವಿಚಾರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಮಮಂದಿರ ಉದ್ಘಾಟನಾ ದಿನದಂದು ರಜೆ ನೀಡಬೇಕು ಎಂದು ಗೊತ್ತಿಲ್ಲ ನನಗೆ, ಆ ವಿಚಾರ ಗೊತ್ತಿಲ್ಲ ಆ ಪತ್ರ ನನಗೆ ಬಂದಿಲ್ಲ ನೋಡ್ತೀನಿ ಎಂದಷ್ಟೇ ಹೇಳಿದರು.

ಸಿಎಂ,ಸಚಿವರು ಅಯೋಧ್ಯೆಗೆ ತೆರಳುವ ವಿಚಾರ ಬಗ್ಗೆಯೂ ಮಾತನಾಡಿ ನಾನು ಇನ್ನೊಂದು ದಿನ ಹೋಗ್ತೀನಿ ಅಂತ ಹೇಳಿದ್ದೇನೆ ತಾನೇ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳ್ತೀರಾ ಎಂದ ಸಿಎಂ ಗರಂ ಆದರು.

ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಹೋಗ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದರು.