ಬೆಂಗಳೂರು :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿವಿಧ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ.

ಚಿತ್ರದುರ್ಗದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ:
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು

ಡಿವಿಜಿ ಪ್ರಶಸ್ತಿ: ವಿ. ವೆಂಕಟೇಶ್, ಬೆಂಗಳೂರು

ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು

ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ

ಡಾ.ಎಂ.ಎಂ. ಕಲಬುರ್ಗಿ ಪ್ರಶಸ್ತಿ: ಸನತ್ ಕುಮಾರ್ ಬೆಳಗಲಿ

ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ: ಆರ್. ಜಯಕುಮಾರ್, ಬೆಂಗಳೂರು

ಪಿ.ಆರ್. ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು

ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ

ರಾಜಶೇಖರ ಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ

ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು

ಮ. ರಾಮಮೂರ್ತಿ ಪ್ರಶಸ್ತಿ: ಎಚ್.ಕೆ. ಬಸವರಾಜು, ಬೆಂಗಳೂರು

ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುಲಿಂಗ ಶಾಸ್ತ್ರಿಮಠ, ಬೆಂಗಳೂರು

ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ

ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ

ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ

ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಕಲಮನಿ, ಬೆಳಗಾವಿ

ವಿಶೇಷ ಪ್ರಶಸ್ತಿ:
ಚಿಕ್ಕಪ್ಪನಳ್ಳಿ ಷಣ್ಮುಖ
ಎಸ್.ಬಿ.ರವಿಕುಮಾರ್
ಶ.ಮಂಜುನಾಥ್
ರವಿ ಮಲ್ಲಾಪುರ