
(ಕೆರ್ಜಾಡಿ ಶ್ರೀ ಬ್ರಹ್ಮಬೈದರ್ಕಳ ನೂತನ ಗರೋಡಿ ರೂ 4.50 ಕೋಟಿ ಗೂ ಮಿಕ್ಕಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯ)
ಆರ್ಡಿ: ಆರ್ಡಿ ಸಮೀಪದ ಕೆರ್ಜಾಡಿಯಲ್ಲಿ ಬಹು ಪುರಾತನ ಕಾಲದ ಶ್ರೀ ಬ್ರಹ್ಮಬೈದರ್ಕಳ ಗರಡಿ ಇತ್ತೀಚಿನ ದಿನಗಳಲ್ಲಿ
ಜೀರ್ಣೋದ್ಧಾರ ಸಮಿತಿ, ಗ್ರಾಮಸ್ಥರು,ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ
ಜೀರ್ಣೋದ್ದಾರದೊಂದಿಗೆ ನೂತನ ಗರಡಿ
ನಿರ್ಮಾಣಗೊಳ್ಳಲಿದೆ. ಕೆರ್ಜಾಡಿ ಗರೋಡಿ ಸುಮಾರು 1980 ರಲ್ಲಿ ಪುನರ್
ನಿರ್ಮಾಣಗೊಂಡಿದೆ. ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಮೂರು ಗ್ರಾಮಗಳ ಸಾವಿರಾರೂ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಶ್ರೀ ಬ್ರಹ್ಮಬೈದರ್ಕಳ, ಶಿವರಾಯ, ಸಪರಿವಾರ ಸಾನಿಧ್ಯಗಳಿವೆ. ಕಾಯದ ಪೂಜೆ, ನೇಮೋತ್ಸವ, ಅಗೆಲು
ಸೇವೆ, ಸೋಣೆ ಆರತಿ, ಮಾರಿ ಪೂಜೆ, ಸಂಕ್ರಾತಿ ಪೂಜೆ, ಶಾರದೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಇತ್ತೀಚಿನ ವರ್ಷಗಳಲ್ಲಿ ಗರೋಡಿಯ ಕೆಲವೊಂದು ಭಾಗಗಳು ಶಿಥಿಲಗೊಂಡಿವೆ, ಗರೋಡಿಯ ಸಮಗ್ರ
ಜೀರ್ಣೋದ್ಧಾರಕ್ಕೆ ಸ್ವರ್ಣಾರೂಡ ಪ್ರಶ್ನೆಯಲ್ಲಿ
ಕಂಡು ಬಂದಿರುವ ಎಲ್ಲಾ ದೋಷಗಳಿಗೆ ನಿವೃತ್ತಿ ಪ್ರಾಯಶ್ಚಿತ, ಪೂಜಾ ಕಾರ್ಯಗಳನ್ನು ಈಗಾಗಲೇ
ನಡೆಸಲಾಗಿದೆ.
ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಶಿವರಾಯ ಗರ್ಭಗುಡಿ, ಸಪರಿವಾರ ದೇವರ ಸಾನಿಧ್ಯ, ಹೆಬ್ಬಾಗಿಲು, ನೇಮದ ಚಪ್ಪರ,ನಾಗಬನದ ಸುತ್ತ ಅವರಣ, ನೆಲಹಾಸು,ಅಡುಗೆ ಕೋಣೆ ಸೇರಿದಂತೆ ನೂತನ ಗರೋಡಿ ನಿರ್ಮಾಣ ಕಾರ್ಯಕ್ಕೆ ಸುಮಾರು ರೂ 4.50
ಕೋಟಿ ಗೂ ಮಿಕ್ಕಿ ವೆಚ್ಚ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಬಾರಿ ಮಾ.18 ರ ನೇಮೋತ್ಸವದ ಬಳಿಕಎ .3 ನೇ ಗುರುವಾರ ಸಂಜೆ ಗರಡಿಯ ಚಲನ ವಿಧಿ( ಕಲೆ ಇಳಿಸುವುದು) ನಂತರ ಜೀಣೋದ್ಧಾರ ಕಾರ್ಯಗಳು ಆರಂಭಗೊಂಡು ಬರುವ ವರ್ಷದ ನೇಮೋತ್ಸವಕ್ಕೆ ಮುಂಚಿತವಾಗಿ ನೂತನ ಗರೋಡಿ ನಿರ್ಮಾಣದ ಕಾರ್ಯಗಳು ಮುಗಿಯಬೇಕಾಗಿರುವುದರಿಂದ ಗ್ರಾಮಸ್ಥರು, ಊರಪರವೂರ ಭಕ್ತಾದಿಗಳು,ದಾನಿಗಳ ಧನಸಹಾಯದ ಅಗತ್ಯವಿದೆ.ಕೆರ್ಜಾಡಿ ಗರೋಡಿ ಸುಮಾರು 1980 ರಲ್ಲಿ ಪುನರ್ನಿರ್ಮಾಣಗೊಂಡಿದೆ. ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಮೂರು ಗ್ರಾಮಗಳ ಗ್ರಾಮಸ್ಥರು ಹಾಗೂ
ಭಕ್ತರಿಗೆ ಸೇರಿದೆ, ನೂತನ ಗರೋಡಿ ನಿರ್ಮಾಣ ಕಾರ್ಯಕ್ಕೆ ಸುಮಾರು ರೂ 4.50 ಕೋಟಿ ಗೂ ಮಿಕ್ಕಿ
ವೆಚ್ಚ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಜೀರ್ಣೋದ್ಧಾರ ಸಮಿತಿ, ಗ್ರಾಮಸ್ಥರು,ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ನೂತನ ಗರಡಿ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ.- ದಯಾನಂದ ಆರ್ ಶೆಟ್ಟಿ, ಕೆರ್ಜಾಡಿ
ದೊಡ್ಮನೆ.ಅಧ್ಯಕ್ಷರು,ಜೀರ್ಣೋದ್ಧಾರ
ಸಮಿತಿ.ಶ್ರೀ ಬ್ರಹ್ಮಬೈದರ್ಕಳ ಗರಡಿ ಕೆರ್ಜಾಡಿ
—–
ಬ್ಯಾಂಕ್ ವಿವರ: ಬ್ಯಾಂಕ್ ಆಫ್ ಬರೋಡ.ಆರ್ಡಿ ಶಾಖೆ. ಎಸ್/ಬಿ ಖಾತೆ:೮೧೯೩೦೧೦೦೦೧೦೦೫೯. (ಶ್ರೀಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ಧಾರಸಮಿತಿ)ಐಎಪ್‌ಎಸ್‌ಸಿ:ಬಿಎಆರ್‌ಬಿಜೀರೊವಿಜೆಎಅರ್‌ಡಿಐ