ಗೋರಖ್‌ಪುರ:
ಅಯೋಧ್ಯೆ ಶ್ರೀರಾಮ ಮಂದಿರ
ಉದ್ಘಾಟನೆಯಾಗುತ್ತಿರುವ ಬೆನ್ನಲ್ಲೇ ಲಕ್ಷ ಲಕ್ಷ ಶ್ರೀರಾಮಚರಿತಮಾನಸ ಪುಸ್ತಕಗಳಿಗೆ ಬೇಡಿಕೆ ಬರುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲವಾದ್ದರಿಂದ ನಮ್ಮ ವೆಬ್‌ಸೈಟ್‌ನಲ್ಲಿ ಶ್ರೀರಾಮಚರಿತ ಮಾನಸವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಅನುಮತಿಸಿದ್ದೇವೆ ಎಂದು ವಿಶ್ವದ ಅತಿ ದೊಡ್ಡ ಪ್ರಕಾಶಕರಲ್ಲಿ ಒಬ್ಬರಾದ ಉತ್ತರ ಪ್ರದೇಶದ ಗೋರಖ್‌ಪುರ್‌ನ ಗೀತಾ ಪ್ರೆಸ್ ತಿಳಿಸಿದೆ.

ಗೀತಾ ಪ್ರೆಸ್‌ ವೆಬ್‌ಸೈಟ್‌ಗೆ ರಾಮಚರಿತಮಾನಸವನ್ನು ಅಪ್‌ಲೋಡ್ ಮಾಡುತ್ತಿದ್ದೇವೆ. ಮಂಗಳವಾರದಿಂದ ಇದು ಉಚಿತ ಡೌನ್‌ಲೋಡ್‌ಗೆ ಲಭ್ಯವಿರುತ್ತದೆ. 15 ದಿನಗಳವರೆಗೆ ಈ ಸೇವೆಯನ್ನು ಒದಗಿಸುತ್ತೇವೆ. 50,000 ಜನರಿಗೆ ಡೌನ್‌ಲೋಡ್ ಮಾಡಲು ಅವಕಾಶ ನೀಡುತ್ತೇವೆ. ಈ ಸೇವೆ ವಿಸ್ತರಿಸುತ್ತೇವೆ ಎಂದು ಪ್ರೆಸ್ ಹೇಳಿದೆ.