| Latest Version 9.0.7 |

State News

ದೇವಸ್ಥಾನದ ಹಿಂದೆ ಎರಡು ತಿಂಗಳ ಹೆಣ್ಣು ಶಿಶು ಪತ್ತೆ

ಬೆಳಗಾವಿ : ಸವದತ್ತಿ ತಾಲೂಕಿನ ಚುಳಕಿ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ರವಿವಾರ ಬೆಳಿಗ್ಗೆ ಎರಡು ತಿಂಗಳ ಹೆಣ್ಣು ಶಿಶು ಪತ್ತೆಯಾಗಿದೆ.

ಶಿಶುವಿಗೆ ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದೆವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೇವೆ. ಬೆಳಗಾವಿಯ ಮಕ್ಕಳ ಸಾಂತ್ವನ ಕೇಂದ್ರದ ಸಿಬ್ಬಂದಿ ಶಿಶುವನ್ನು ಆರೈಕೆ ಮಾಡಲಿದ್ದಾರೆ ಎಂದು ಸಿಡಿಪಿಒ ಅಮೃತ ಸಾಣಿಕೊಪ್ಪ ತಿಳಿಸಿದರು.

ಅಪರಿಚಿತರು ಶಿಶುವನ್ನು ಹೊದಿಕೆಯಲ್ಲಿ ಮಲಗಿಸಿ ಬಿಟ್ಟು ಹೋಗಿದ್ದರು. ಬೆಳಿಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಬಂದಾಗ ಶಿಶುವನ್ನು ನೋಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಶಿಶುವನ್ನು ರಕ್ಷಿಸಿದರು.

 

Team Udayaprabha
";