ಬೆಳಗಾವಿ :
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ನಗರದಲ್ಲಿ ಶಾಸಕ ಅಭಯ ಪಾಟೀಲ ಅವರು ರಾಮನ ಭಕ್ತರ ಕೈ ಮೇಲೆ ಟ್ಯಾಟೂ ಹಾಕಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಅಭಯ ಪಾಟೀಲ ಮಾತನಾಡಿ, ಟ್ಯಾಟೂ ಹಾಕಿಸುವ ಅಭಿಯಾನ ಕೈಗೊಳ್ಳುತ್ತಿರುವುದು ಇದೇ ಮೊದಲು. ಅಸಕ್ತರು ತಮ್ಮ ಕೈ ಮೇಲೆ ರಾಮನ ಚಿತ್ರ ಮತ್ತು ತಮಗಿಷ್ಟವಾದ ಭಾಷೆಗಳಲ್ಲಿ ರಾಮನಿಗೆ ಸಂಬಂಧಿಸಿದ ಘೋಷಣೆ ಬರೆಸಿಕೊಳ್ಳುತ್ತಿದ್ದಾರೆ. 3000ಕ್ಕೂ ಹೆಚ್ಚು ಜನರು ಇದಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜನವರಿ 21ರಿಂದ 10 ಸಾವಿರ ಜನರಿಗೆ ಟ್ಯಾಟೂ ಹಾಕಿಸುವ ಗುರಿ ಹೊಂದಿದ್ದೇವೆ. ಬೆಳಗಾವಿಯ ಶಿವಾಜಿ ಉದ್ಯಾನ, ಆರ್‌ಪಿಡಿ, ಗೋಗಟೆ ಕಾಲೇಜುಗಳ ಬಳಿ ಮತ್ತು ಅನಗೋಳ ಹರಿ ಮಂದಿರದಲ್ಲಿ ಬುಧವಾರದಿಂದ ಕಲಾವಿದರು ಲಭ್ಯ ಇದ್ದು, ಮಹಿಳೆಯರ ಕೈ ಮೇಲೆ ಟ್ಯಾಟೂ ಹಾಕಿಸಲು ಪ್ರತ್ಯೇಕ ಮಹಿಳಾ ಕಲಾವಿದರು ಇರಲಿದ್ದಾರೆ ಎಂದು ವಿವರಿಸಿದರು.