ಬೆಳಗಾವಿ :
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಮಹಾನಗರ ಇವರ ಆಶ್ರಯದಲ್ಲಿ ಬೆಳಗಾವಿಯ ಗೊಮಟೇಶ ವಿದ್ಯಾಪೀಠದ ಆವರಣದಲ್ಲಿ ನವ ಭಾರತ ಕಲ್ಪನೆಯಲ್ಲಿ ಕೇಂದ್ರ ಸರ್ಕಾರದ ಸಾಧನೆ ಕುರಿತು ನವ ಮತದಾರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಭಾರತ ಮಾತೆಯ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಯುವಕರೊಂದಿಗೆ ಸಂವಾದದಲ್ಲಿ ನಡೆಯಿತು. ಯುವಕರು-ಯುವತಿಯರು ಹಲವಾರು ಪ್ರಶ್ನೆ ಕೇಳಿದರು. ಪ್ರತಿಯೊಂದು ಪ್ರಶ್ನೆಗೂ ವಿವರಿಸಿ ಸಂವಾದ ಕಾರ್ಯಕ್ರಮ ಜರಗಿತು.
ಈ ವೇಳೆ ಮಾತನಾಡಿದ ಹಣಮಂತ ಆರ್ ನಿರಾಣಿ ಮಾತನಾಡಿ, ಮತದಾನ ಪ್ರತಿ ಒಬ್ಬರ ಹಕ್ಕು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ನೀಡಿ ದೇಶಕ್ಕೆ ಒಬ್ಬ ಸದೃಢ ನಾಯಕನ್ನು ನೀಡಿ ಮತ ಚಲಾಯಿಸಿ ಹಾಗೂ ಮೋದಿ ಜೀ ಅವರ ಕೊಡುಗೆಗಳನ್ನು ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಗೊಮಟೇಶ ವಿದ್ಯಾಪೀಠದ ಸದಸ್ಯ ವಿ.ವಿ. ಸನತಕುಮಾರ ವಹಿಸಿದ್ದರು.
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ಸುಭಾಸ ಪಾಟೀಲ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಶ್ರೀಸರ ದೇಸಾಯಿ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿ ಈರಣ್ಣ ಖೋತ, ಬೆಳಗಾವಿ ಮಹಾನಗರ ಪಾಲಿಕೆ ನಗರ ಸೇವಕ ರಾಜಶೇಖರ ಡೋಣಿ, ಕೋಷ್ಠಾಧ್ಯಕ್ಷ ಮಲ್ಲಿಕಾರ್ಜುನ ಮಾದನ್ನವರ, ಯುವಕರು- ಯುವತಿಯರು, ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.