ಬೆಳಗಾವಿ :
ಜನರಿಗೆ ಸುಳ್ಳು ಹೇಳುವುದನ್ನು ಬಿಜೆಪಿಯವರು ಚೆನ್ನಾಗಿ ಕಲಿತಿದ್ದಾರೆ. ಇದನ್ನೆ ಜನರು ನಂಬುತ್ತಾರೆ. ಆದರೆ ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸೋಮವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ವಿಚಾರವಾಗಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಿಜೆಪಿಯವರ ಹತ್ತಿರ ಸಂಪನ್ಮೂಲ ಚೆನ್ನಾಗಿ ಇವೆ. ತೆಲಂಗಾಣದಲ್ಲಿ ಬಿಆರ್ಎಸ್ ನಮಗಿಂತ ಹೆಚ್ಚು ಭರವಸೆ ನೀಡಿದರು. ಗ್ಯಾರಂಟಿ ಕೊಡದೆ ಇದ್ರು ನಾವು ಗೆಲ್ಲುತ್ತಿದ್ದೆವು. ಕಾರಣ ಕೆಸಿಆರ್ ಜನರ ಮಧ್ಯೆ ಇರುತ್ತಿರಲಿಲ್ಲ ಎಂದರು.
ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ವಿಚಾರವಾಗಿ ಮಾತನಾಡಿ, ಉತ್ತರ ಕರ್ನಾಟಕದ ಜತೆಗೆ ರಾಜ್ಯದ ಎಲ್ಲಾ ವಿಚಾರ ಚರ್ಚೆಗೆ ಬರುತ್ತದೆ. ಹೆಚ್ಚು ಈ ಭಾಗದ ವಿಚಾರ ಚರ್ಚೆ ಇರುತ್ತದೆ ಎಂದು ತಿಳಿಸಿದರು.