| Latest Version 9.0.7 |

Local News

ಯುವಜನತೆಗೆ ಪೌರಾಣಿಕ ಕಥಾ ಪ್ರಸಂಗ ಅರಿವು ಅಗತ್ಯ

ಹಿಡಕಲ್ ಡ್ಯಾಂ : ಪೌರಾಣಿಕ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಯಕ್ಷಗಾನ ಮತ್ತು ಪ್ರಸಂಗಗಳ ಪ್ರದರ್ಶನಗಳು ಯುವ ಸಮುದಾಯಕ್ಕೆ ಅತ್ಯಂತ ಅವಶ್ಯ ಎಂದು ಸಿಪಿಐ ಜಾವೇದ್ ಮುಷಾಪುರಿ ಹೇಳಿದರು.

ಹಿಡಕಲ್‌ ಡ್ಯಾಂನ ಶ್ರೀ ಶಿವಾಲಯ ಮಂದಿರದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಪೌರಾಣಿಕ ಯಕ್ಷಗಾನ ಪ್ರದರ್ಶನಕ್ಕೆ ಚಂಡೆ ಬಾರಿಸುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.

‘ವೇಷಭೂಷಣಗಳೊಂದಿಗೆ ಕಲಾ ತಂಡಗಳು ನಡೆಸಿಕೊಡುವ ಇಂತಹ ಪ್ರದರ್ಶನಗಳು ಯುವಜನತೆಗೆ ಸಂಸ್ಕೃತಿಯ ಅರಿವು ಮೂಡಿಸುತ್ತವೆ. ಉಡುಪಿ ಭಾಗದ ಜನರು ದೇಶದೆಲ್ಲೆಡೆ ಹೋಟೆಲ್ ಉದ್ಯಮದಲ್ಲಿ ತಮ್ಮದೇ ಆದ ಯಶಸ್ಸು ಕಂಡಿದ್ದಾರೆ. ಅವರಲ್ಲಿರುವ ಪ್ರಾಮಾಣಿಕತೆ, ಸ್ವಚ್ಛತೆ ಮತ್ತು ವಿಶ್ವಾಸಾರ್ಹತೆ

ಪ್ರತಿಯೊಬ್ಬರಿಗೂ ಮಾದರಿ. ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಮಹತ್ವ ಸಮುದಾಯದವರು, ತಮ್ಮ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಕಲಾತಂಡಗಳ ಮೂಲಕ ತಲುಪಿಸುತ್ತಿರುವುದು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದರು.

ಉದ್ಯಮಿ ಗಣೇಶ ಪೂಜಾರಿ, ಉದಯ ಶೆಟ್ಟಿ, ವಿಜಯ ಶೆಟ್ಟಿ ಮಲ್ಲಪ್ಪ ಸಾರಾವಾಡಿ, ಚಂದ್ರಶೇಖರ ಗಣಾಚಾರಿ, ಸಾಹಿತಿ ಎಸ್.ಎಂ. ಶಿರೂರ, ಚಿನ್ನಪ್ಪ ಕಂಕಣವಾಡಿ, ಸುರೇಶ ಕಾಂಬಳೆ, ಗಣೇಶ, ಶ್ರೀಕಾಂತ ರಾಜನಹಳ್ಳಿ, ಪ್ರಕಾಶ ಹೊಸಮನಿ, ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ, ರಾಘವೇಂದ್ರ ಮಯ್ಯ ಸೇರಿದಂತೆ ಇನ್ನಿತರರು ಇದ್ದರು.

Team Udayaprabha
";