ಬಾಗಲಕೋಟೆ : ಮುಧೋಳ ತಾಲ್ಲೂಕಿನ ಹಲಗಲಿಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಆಪಘಾತ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ.
ಅವರು ಮದುವೆಗೆ ತೆರಳಿ ಮರಳುತ್ತಿದ್ದಾಗ ದುರ್ಘಟನೆ ನಡೆದಿದೆ.

ಒಂದು ಮಗು ಸೇರಿ ಮೂವರಿಗೆ ಗಾಯಗಳಾಗಿವೆ.
ಹನಮವ್ವ ಬಸಪ್ಪ ಕಠಾಣಿ (63), ಕೆಂಚಪ್ಪ ಬಸಪ್ಪ ಕಠಾಣಿ (32) ಮೃತ ತಾಯಿ ಮತ್ತು ಮಗ. ಹನಮವ್ವ ಮತ್ತು ಕೆಂಚಪ್ಪ ಅವರು ಮುಧೋಳದಿಂದ ಹಲಗಲಿ ಕಡೆ ಹೊರಟಿದ್ದರು. ಅವರು ಮದುವೆ ಕಾರ್ಯಕ್ಕೆ ತೆರಳಿದ್ದರು. ಹಲಗಲಿಯಿಂದ ತೋಟಕ್ಕೆ ಮತ್ತೊಂದು ಬೈಕ್ ತೆರಳುತ್ತಿತ್ತು. ಎರಡೂ ಬೈಕ್‌ಗಳು ಗ್ರಾಮದ ಹೊರವಲಯದಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ.

ಘಟನೆಯಲ್ಲಿ ತಾಯಿ ಮತ್ತು ಮಗ ಮೃತಪಟ್ಟರೆ, ಮತ್ತೊಂದು ಬೈಕ್ ನಲ್ಲಿದ್ದ ಮಗು ಸೇರಿ ಮೂವರಿಗೆ ಗಾಯಗಳಾಗಿವೆ.