ಹಾವೇರಿ: ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ಎಂಬಾತನಿಗೆ ಶಿಕ್ಷಕರು ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರವೇಶ ಪತ್ರ ನೀಡಿಲ್ಲ.
ಅಭಿಷೇಕ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಲರ್ಜಿ ಮೊಡವೆಗೆ ತುತ್ತಾಗಿದ್ದರಿಂದ ಅಭಿಷೇಕ್ ಶಾಲೆಗೆ ಬಾರದೆ ಆಸ್ಪತ್ರೆ ಸೇರಿದ್ದ. ಇತ್ತ ಹಾಜರಾತಿ ಕೊರತೆಯ ಕಾರಣ ನೀಡಿ ಪ್ರವೇಶ ಪತ್ರವನ್ನು ಕೊಡಲು ಶಿಕ್ಷಕರು ನಿರಾಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಷೇಕ್ ಹಾಗೂ ಆತನ ಪೋಷಕರು ಮುಖ್ಯ ಶಿಕ್ಷಕರ ವಿರುದ್ಧ ಪ್ರತಿಭಟಿಸಿದರು. ಹಾವೇರಿ ಡಿಸಿ ಕಚೇರಿ ಎದುರು ಅಣಕು ಪರೀಕ್ಷೆ ಬರೆದು ಅಭಿಷೇಕ್ ಪ್ರತಿಭಟಿಸಿದ್ದಾನೆ. ಮಗನ ಭವಿಷ್ಯ ನೆನೆದು ಪಾಲಕರು ಕಣ್ಣೀರು ಹಾಕಿದ್ದರು. ಡಿಡಿಪಿಐ ಸುರೇಶ್ ಹುಗ್ಗಿ ಮತ್ತು ಎಡಿಸಿ ವೀರಮಲ್ಲಪ್ಪ ಪೂಜಾರ್ಗೆ ಮನವಿ ಪತ್ರವನ್ನು ಸಲ್ಲಿಸಿದರು.