ಬೆಳಗಾವಿ :
ಬೆಳಗಾವಿಯ ಬಸವನಗಲ್ಲಿಯಲ್ಲಿ ಮನೆಯಲ್ಲಿ ಸಂಭವಿಸಿದ ಗ್ಯಾಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮೃತರ ಸಂಖ್ಯೆ ಇದೀಗ ಮೂರಕ್ಕೆ ಏರಿಕೆಗೊಂಡಿದೆ.

84 ವರ್ಷದ ಗೋಪಾಲಕೃಷ್ಣ ಭಟ್ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ. ಅವರ ಸೊಸೆ ಲಲಿತಾ ಭಟ್ ಅವರ ಸ್ಥಿತಿ ಗಂಭೀರವಾಗಿದೆ. ಪುತ್ರ ಮೋಹನ್ ಭಟ್ ಆರೋಗ್ಯ ಸ್ಥಿರವಾಗಿದೆ. 78 ವರ್ಷದ ಕಮಲಾಕ್ಷಿ ಭಟ್ ಮತ್ತು 28 ವರ್ಷದ ಹೇಮಂತ್ ಭಟ್ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ.

ಉಡುಪಿ ಬಳಿಯ ಆದಿಉಡುಪಿ ಮೂಲದ ಈ ಕುಟುಂಬ ಬೆಳಗಾವಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿತ್ತು. ಭಾನುವಾರ ಸಂಜೆ ಗ್ಯಾಸ್ ಸೋರಿಕೆಗೊಂಡ ಪರಿಣಾಮ ಅನಾಹುತ ಸಂಭವಿಸಿತ್ತು.