ದೆಹಲಿ :
ನರೇಂದ್ರ ಮೋದಿ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಸರ್ಕಾರ ಐವರು ಸಾಧಕರಿಗೆ ಭಾರತ ರತ್ನ ಘೋಷಿಸಿದೆ.