ಅಧಿಕ ವರ್ಷ’ ಏಕೆ ಬರುತ್ತದೆ ಗೊತ್ತೇ ?

2024 ನ್ನು ‘ಅಧಿಕ ವರ್ಷ’ (Leap Year) ಎಂದು ಕರೆಯಲಾಗುತ್ತದೆ.. ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ, ಇದು ಒಂದು ದಿನ ಹೆಚ್ಚು. ಅಂದರೆ 366 ದಿನಗಳು ಇರುತ್ತವೆ. ಭೂಮಿಯು ಸೂರ್ಯನ ಸುತ್ತ ಸುತ್ತಲು 365.25 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ, ಇನ್ನುಳಿದ 0.242 ದಿನವನ್ನು ಸೇರಿಸಿ 4 ವರ್ಷಕ್ಕೊಮ್ಮೆ ಒಂದು ಪೂರ್ಣ ದಿನವೆಂದು ಪರಿಗಣಿಸಲಾಗುತ್ತದೆ. ಆ ವರ್ಷವನ್ನು ಅಧಿಕ ವರ್ಷ ಎಂದು ಕರೆಯಲಾಗುತ್ತದೆ. ಈ ವರ್ಷ ಫೆಬ್ರವರಿ 29 ಬಂದಿದೆ.

ಅಂತರಿಕ್ಷ ಲೆಕ್ಕಾಚಾರದಲ್ಲಿನ ವರ್ಷದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳಲು ಒಂದು ದಿನ/ವಾರ/ತಿಂಗಳನ್ನು ಹೆಚ್ಚು ಹೊಂದಿರುವ ಪಂಚಾಂಗದ (ಕ್ಯಾಲೆಂಡರ್) ವರ್ಷವನ್ನು ಅಧಿಕವರ್ಷ ಎನ್ನುವರು. ಸಾಮಾನ್ಯವಾಗಿ ಅಧಿಕವರ್ಷದಲ್ಲಿ ಒಂದು ದಿನ ಹೆಚ್ಚಿರುತ್ತದೆ. ಉದಾಹರಣೆ: ಅಧಿಕವರ್ಷದಲ್ಲಿನ ಫೆಬ್ರುವರಿ ತಿಂಗಳಿನಲ್ಲಿ 28 ದಿನಗಳ ಬದಲಿಗೆ 29 ದಿನಗಳು ಬರುತ್ತದೆ. ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯ ವರ್ಷ ಎನ್ನುವರು. ಉದಾಹರಣೆಗೆ ಫೆಬ್ರುವರಿ ತಿಂಗಳಲ್ಲಿ ಕೇವಲ 28 ರ ಬದಲಿಗೆ 29 ದಿನಗಳಿರುತ್ತವೆ. ಋತುಗಳು ಮತ್ತು ಖಗೋಳಘಟನೆಗಳು ನಿಶ್ಚಿತ ದಿನಗಳ ನಂತರ ಪುನರಾವೃತ್ತಿಯಾಗದೆ ಪ್ರತಿವರುಷದಲ್ಲಿ ಅಷ್ಟೇ ದಿನಗಳುಳ್ಳ ಪಂಚಾಗವು ತಾನು ತೋರಿಸಬೇಕಾದ ಖಗೋಳ ಘಟನೆಯ ವಿಷಯದಲ್ಲಿ ಕ್ರಮೇಣವಾಗಿ ಲೆಕ್ಕತಪ್ಪುತ್ತದೆ. ಆಗಾಗ್ಗೆ ಒಂದು ಅಧಿಕದಿನ ಅಥವಾ ತಿಂಗಳನ್ನು (ನಿಯಮಿತವಾಗಿ) ಆ ವರ್ಷಕ್ಕೆ ಸೇರಿಸುವ ಮೂಲಕ ,ಅನಿಯಮಿತತೆಯನ್ನು ಸರಿಪಡಿಸಬಹುದು.ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯವರ್ಷವೆಂದು ಕರೆಯುತ್ತಾರೆ. (ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) ಅಧಿಕ ಸೆಕೆಂಡ್‌ನೊಂದಿಗೆ ಗೊಂದಲಿಸಿಕೊಳ್ಳಬಾರದು.