ಬೆಳಗಾವಿ: ಬೆಳಗಾವಿಯಿಂದ ಹುದಲಿವರೆಗೆ ಹೋಗುವ ಬಳ್ಳಾರಿ ನಾಲೆಯಿಂದ ಸಣ್ಣ ರೈತರಿಗೆ ಅನೇಕ ಸಮಸ್ಯೆ ಉಂಟಾಗಿದೆ. ಇದರ ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಹಲವಾರು ವರ್ಷಗಳಿಂದ ಬಳ್ಳಾರಿ ನಾಲಾ ಅಭಿವೃದ್ಧಿಯಾಗದ ಕಾರಣ ರೈತರಿಗೆ ತೊಂದರೆಯಾಗಿವೆ. ಅತಿವೃಷ್ಟಿ ಬಂದಾಗ ನೀರು ನಿಂತು ಬೆಳೆ ನಾಶವಾಗುತ್ತದೆ. ಇತ್ತೀಚಿಗೆ ಕಸ ಮತ್ತು ಹೂಳು ತುಂಬಿ ನೀರು ಹರಿದು ಹೋಗಲು ಸಾಧ್ಯವಾಗದೆ ಜಮೀನಿನಲ್ಲಿ ಬರುತ್ತಿದ್ದು ಮಳೆ ಬೆಳೆ ನೀರಿನಲ್ಲಿ ಮುಳುಗಿ ನಷ್ಟವಾಗುತ್ತಿದೆ. ಈ ಹಿಂದಿನ ಸರಕಾರ ನಾಲಾ ಅಭಿವೃದ್ಧಿಗೆ 800 ಕೋಟಿ ರೂ.ಯೋಜನೆ ರೂಪಿಸಿತ್ತು. ಆದರೆ ಅದು ಜಾರಿಗೆ ಬರಲೇ ಇಲ್ಲ ಎಂದು ತಿಳಿಸಿದರು.