ದೆಹಲಿ: ಸದ್ಯದಲ್ಲೇ ಬ್ಯಾಂಕುಗಳಿಗೆ ಎಲ್ಲಾ ಶನಿವಾರ ರಜೆ ಸಿಗಲಿದೆ. ಈ ಸಂಬಂಧ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ಭಾರತೀಯ ಬ್ಯಾಂಕುಗಳ ಸಂಘದ ನಡುವೆ ಒಪ್ಪಂದವಾಗಿದ್ದು ಸಹಿ ಹಾಕಿವೆ.

ಶೇ.17ರಷ್ಟು ವೇತನ ಹೆಚ್ಚಳದ ಬಗ್ಗೆಯೂ ಸಹಮತ ಮೂಡಿದೆ. ಪ್ರಸ್ತುತ ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಒಮ್ಮೆ ಈ ಪ್ರಸ್ತಾಪಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದರೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಶುಕ್ರವಾರ ನಡೆದಿರುವ ಸಭೆಯಲ್ಲಿ ಎರಡೂ ಸಂಘಟ ನೆಗಳು ರಜೆ ಮತ್ತು ವೇತನದ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಎಲ್ಲ ಶನಿವಾರ ರಜೆ ಘೋಷಣೆಯಾದ ಮೇಲೆ, ಬ್ಯಾಂಕುಗಳ ಕೆಲಸದ ಅವಧಿಯ ಬದಲಾವಣೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಘೋಷಣೆಯಾಗಲಿದೆ.