ಬೆಳಗಾವಿ :
ಬೆಳಗಾವಿ ಮತ್ತೊಬ್ಬ ಮಹಿಳೆಯಾಗಿ ಎರಡೆರಡು ಸಲ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೈಲಹೊಂಗಲ ತಾಲೂಕು ತಿಗಡಿಯಲ್ಲಿ ನಡೆದಿದೆ.

ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಸಂತ್ರಸ್ತೆ, ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿದ್ದಳು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದ. ಈ ಮಹಿಳೆಯ ಮಾವನ ಹೆಸರಿನಲ್ಲಿ ಆರು ಎಕರೆ ಭೂಮಿ ಇತ್ತು. ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಪಡೆದು ಜೀವ ಬೆದರಿಕೆ ಹಾಕಿ ಎರಡೆರಡು ಸಲ ಅರೆಬೆತ್ತಲೆ ನಡೆಸಿ ಹಲ್ಲೆ ಮಾಡಿದ್ದಾರೆ. ತಿಗಡಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿ ಸೇರಿ ಒಟ್ಟು 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು ದಾಖಲು ಆಗಿದ್ದರೂ ಇದುವರೆಗೆ ಆರೋಪಿಗಳ ಬಂಧನವೇ ಆಗಿಲ್ಲ. ಸದ್ಯ ಈ ಪ್ರಕರಣ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ಆರು ಮಹಿಳೆಯರು ಸೇರಿ 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಸೆಂಬರ್ 30ರಂದು ಎಫ್ ಐಆರ್ ದಾಖಲಾಗಿದೆ.