ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಚಾಯ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಮತೀರ್ಥ ನಗರದಲ್ಲಿ ಮತಯಾಚಿಸಿದರು.‌
ಇಂದು ಬೆಳ್ಳಂ ಬೆಳಗ್ಗೆ ರಾಮತಿರ್ಥ ನಗರದ ವಾರ್ಡ್ ನಂ 46ರ ವ್ಯಾಪ್ತಿಯ ಶಿವಾಲಯ ಗಾರ್ಡನ್ ಹತ್ತಿರ ಹಾಗೂ ಗಣೇಶ್ ಸರ್ಕಲ್ ಹತ್ತಿರ ಚಾಯ್ ಕುಡಿಯುದರ ಮೂಲಕ ಚರ್ಚಿಸಿ ಮತಯಾಚನೆ ಮಾಡಿದರು.‌ ಈ ವೇಳೆ ಸ್ಥಳೀಯರು ಜಗದೀಶ್ ಶೆಟ್ಟರ್ ಅವರಿಗೆ ಮತ ನೀಡಿ ಗೆಲ್ಲಿಸುವದಾಗಿ ಭರವಸೆ ನೀಡಿದ್ದಾರೆ.‌
ಈ ವೇಳೆ ರಾಜ್ಯ ಬಿಜೆಪಿ ಉಪಾದ್ಯಕ್ಷ ಅನಿಲ್ ಬೆನಕೆ, ವಾರ್ಡ್ ನಂ 46 ರ ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಮಹಾನಗರ ಪ್ರಧಾನ ಕಾರ್ಯದರ್ಶಿ ಈರಯ್ಯ ಖೋತ, ಕೆದಾರ್ ಜೋರಾಪುರ್, ವಿಲಾಸ್ ಕೆರೂರ್, ಸಂತೋಷ್ ದೇಸಾಯಿ, ನವೀನ್ ಹಿರೇಮಠ, ಶಶಿ ಬಾಡ್ಕರ್, ಸಚಿನ್ ಮದ್ವಾಲ್, ಸುಧೀರ್, ಬಸವರಾಜ ಯರಗನವಿ, ಸಿ ಎಸ್ ಬಿಡ್ನಾಳ್, ಎಂ.ಟಿ ಪಾಟೀಲ್, ಚನ್ನಗೌಡ ಅಪ್ಪ ಸಾಬ್ ಮತ್ತು ಅಣ್ಣಸಾಬ ಜೈನ್, ರಾಜೇಂದ್ರ ಹಲಗಿ, ಡಾ. ಬಿದ್ರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.