ಸಂತೆಕಟ್ಟೆ : ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನದ ನವೀಕೃತ ತಾಮ್ರಮಯ ಆಲಯ ಸಮರ್ಪಣೆ ಪ್ರಯುಕ್ತ “ಪುನಃ ಪ್ರತಿಷ್ಠೆ” “ಬ್ರಹ್ಮಕಲಶೋತ್ಸವ” ಹಾಗೂ “ವಾರ್ಷಿಕ ನೇಮೋತ್ಸವ” ಮಹಾ ಚಂಡಿಕಾಯಾಗ, ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವು ಮಾ.25 ರಿಂದ ಮಾ.30 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ

ಜರುಗಲಿರುವುದು.

*ಮಾ.25* ರಂದು ಸಂಜೆ 4.30ಕ್ಕೆ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಬಬ್ಬುಸ್ಥಾನ, ಗರಡಿ, ಕೊರಗಜ್ಜ ಮಾರ್ಗವಾಗಿ ಚಿಕ್ಕಮ್ಮ ದೇವಸ್ಥಾನ, ಕುದ್ರುಚಾವಡಿ, ಬೊಮ್ಮರ್ಯ ಮಾರ್ಗವಾಗಿ ನಯಂಪಳ್ಳಿ, ಎಲ್‌.ವಿ.ಟಿ ದೇವಸ್ಥಾನ, ಅಂಬಾಗಿಲು, ವ್ಯಾಯಾಮ ಶಾಲೆ ಮಾರ್ಗವಾಗಿ ಮಣಿಪಾಲ ರಸ್ತೆ, ಶ್ಯಾಂ ಸರ್ಕಲ್‌ನಿಂದ ಕಟ್ಟೆ ಸಾನಿಧ್ಯಕ್ಕೆ ತಲುಪಲಿದೆ.

*ಮಾ.26* ರಂದು ಸಂಜೆ 6 ರಿಂದ ಗುಡಿ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ,ವಾಸ್ತು ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ, ದ್ವಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

*ಮಾ .27* ರಂದು ಬೆಳಿಗ್ಗೆ 8ರಿಂದ ಆದ್ಯಗಣಯಾಗ, ಪ್ರಾಯಶ್ಚಿತ ಹೋಮಾದಿಗಳು, ಪೂರ್ವಾಹ್ನ 11.35ಕ್ಕೆ ಸರಿಯಾಗಿ ಮಿಥುನ ಲಗ್ನದಲ್ಲಿ ಶ್ರೀ “ದೇವಿಯ ಪ್ರತಿಷ್ಠೆ,” “ಧೂಮಾವತಿಯ ಪ್ರತಿಷ್ಠೆ”, ಪಂಚಾಮೃತ ಕಲಶಾಭಿಷೇಕ,
ಸಂಜೆ 6 ರಿಂದ ಸುದರ್ಶನ ಹೋಮ, ದಿಶಾ ಹೋಮ,‌ ಮಂಟಪ ನಮಸ್ಕಾರ ನಡೆಯಲಿದೆ.

*ಮಾ.28* ರಂದು ಬೆಳಿಗ್ಗೆ 8ರಿಂದ ಗಣಯಾಗ, ದುರ್ಗಾ ಹೋಮ, 11.30 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ
“*ಶ್ರೀ ಮಹಾದೇವಿ ಅಮ್ಮನವರಿಗೆ ಶತ ಅಷ್ಟೋತ್ತರ (108) ಕಲಶ ಸಹಿತ ಬ್ರಹ್ಮಕಲಶಾಭಿಷೇಕ*
*ಪಂಚ ಧೂಮಾವತಿಗೆ ಪಂಚವಿಂಶತಿ (25) ಕಲಶ ಸಹಿತ ಬ್ರಹ್ಮಕಲಶಾಭಿಷೇಕ”*
ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ 12 ರಿಂದ ಮಹಾ *ಅನ್ನಸಂತರ್ಪಣೆ* ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ”ಇಂಚರ” ಮೆಲೊಡೀಸ್ ಹೆಬ್ರಿ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ.
ಸಾಯಂಕಾಲ 6 ಕ್ಕೆ ದೀಪಾರಾಧನೆ, ರಂಗಪೂಜೆ, ತಂದೆ ನಂತರ ಶ್ರೀ ಅಮ್ಮನವರ ಮತ್ತು ಧೂಮಾವತಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.

*ಮಾ.29* ರಂದು ಸಂಜೆ 6.30 ಕ್ಕೆ ಪ್ರಸನ್ನ ಪೂಜೆ,
“ಶ್ರೀ ಗುರು ಕುಣಿತ ಭಜನಾ ಮಂಡಳಿ ಅಂಬಲಪಾಡಿ” ಇವರಿಂದ ಕುಣಿತ ಭಜನೆ. ರಾತ್ರಿ 8ರಿಂದ ವಿಜಯ ಎನ್ ಸುವರ್ಣ ಸಾಂಸ್ಕೃತಿಕ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8.30 ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ
“ಭಕ್ತಿ ಸಂಗೀತ ಗಾನ ಸಂಭ್ರಮ” ನಡೆಯಲಿದೆ.

*ಮಾ.30* ರಂದು ಬೆಳಿಗ್ಗೆ 9.30ಕ್ಕೆ
ಮಹಾ ಚಂಡಿಕಾಯಾಗ, ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಚಂಡಿಕಾ ಯಾಗದ ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ‌ಸಾರ್ವಜನಿಕ “ಮಹಾ ಅನ್ನ ಸಂತರ್ಪಣೆ” ಹಾಗೂ ರಾತ್ರಿ 9.30ರಿಂದ ಪಂಚ ಧೂಮಾವತಿ ಕೋಲ ಸೇವೆ ಜರುಗಲಿರುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.