ಬೆಳಗಾವಿ :
ಚನ್ನಮ್ಮನ ಕಿತ್ತೂರಿನ ಕೆಇಬಿ ಆವರಣದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂಬದ ಮೇಲೆಯೇ ಲೈನ್ ಮ್ಯಾನ್ ಮೃತಪಟ್ಟ ದಾರುಣ ಘಟನೆ ಶುಕ್ರವಾರ ನಡೆದಿದೆ.
ಹುಲಿಕಟ್ಟಿ ಗ್ರಾಮದ ಪ್ರೇಮಾನಂದ ಎಮ್ಮಿ(25) ಮೃತಪಟ್ಟವರು. ಶವವನ್ನು ಸರ್ಕಾರಿ ಆಸ್ಪತ್ರೆ ರವಾನೆ ಮಾಡಲಾಗಿದೆ.
ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೆ ಕಂಬ ಹತ್ತಿಸಿದ್ದಕ್ಕೆ ಪ್ರೇಮಾನಂದ ಅವರ ಕುಟುಂಬಸ್ಥರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.