ದೆಹಲಿ : ಲೋಕಸಭಾ ಚುನಾವಣೆಯ ರಂಗು ಕಾವೇರಿದೆ. ಎತ್ತ ನೋಡಿದರತ್ತ ಎಲ್ಲಾ ಪಕ್ಷಗಳ ಪ್ರಚಾರದ ಕಾರ್ಯ ಭರದಿಂದ ನಡೆಯುತ್ತಿದೆ. ಏತನ್ಮಧ್ಯೆ ಬಿಜೆಪಿಯು ಭಾರತೀಯ ಜನತಾ ಪಕ್ಷವು ಮೂರು ರಾಜ್ಯಗಳಿಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿಯು ಮೂರು ರಾಜ್ಯಗಳಿಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಮೂರು ಪಟ್ಟಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ. ಆಯಾ ರಾಜ್ಯಗಳ ಅನೇಕ ಪ್ರಮುಖ ಬಿಜೆಪಿ ನಾಯಕರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗದ ಕೆಲವು ನಾಯಕರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇದೆ.
ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 25 ದಿನಗಳು ಬಾಕಿ ಉಳಿದಿರುವುದು ಗಮನಾರ್ಹ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ದೇಶದ ವಿವಿಧೆಡೆ ನಡೆಯಲಿದೆ. ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ
ರಾಜ್ಯಗಳಿಗೆ ಸ್ಟಾರ್ ಪ್ರಚಾರಕರ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಬಿಹಾರದ ಪಟ್ಟಿ ಗಮನಿಸುವುದಾದರೆ, ಇಲ್ಲಿ ಅಶ್ವನಿ ಚೌಬೆ ಸ್ಟಾರ್ ಪ್ರಚಾರಕರಾಗಿದ್ದಾರೆ. ಚುನಾವಣೆಗೆ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನೇಕ ಹೆಸರುಗಳು ಸೇರಿದೆ. ಇನ್ನು ಇತರ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಸೈಯದ್ ಶಾನವಾಜ್ ಹುಸೇನ್ ಬಿಹಾರದಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ.
ಪ್ರಮುಖ ಕೇಂದ್ರ ನಾಯಕರಲ್ಲದೆ, ಬಿಹಾರದ ನಾಯಕರಾದ ಸುಶೀಲ್ ಕುಮಾರ್ ಮೋದಿ, ಮಂಗಲ್ ಪಾಂಡೆ, ಸಂಜಯ್ ಜೈಸ್ವಾಲ್, ರೇಣು ದೇವಿ, ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಅನಿಲ್ ಶರ್ಮಾ, ನಿವೇದಿತಾ ಸಿಂಗ್ ಮತ್ತು ನಿಕ್ಕಿ ಹೆಂಬ್ರೆನ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದು, ಇನ್ನು, ಕಳೆದ 10 ವರ್ಷಗಳಿಂದ ದೆಹಲಿ ಸಂಸದರಾಗಿರುವ ಭೋಜ್ಪುರಿ ನಟ ಮನೋಜ್ ತಿವಾರಿ ಬಿಹಾರದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಕೂಡ ಬಿಹಾರದಲ್ಲಿ ಸ್ಟಾರ್ ಪ್ರಚಾರಕರಾಗಿದ್ದಾರೆ.
ಎಲ್ಲಾ ಪಟ್ಟಿಯಲ್ಲಿ
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರೀ ಬೇಡಿಕೆ ಪಡೆದುಕೊಂಡಿದ್ದಾರೆ.