ಭಟ್ಕಳ: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಸೋಮವಾರ ಮುರುಡೇಶ್ವರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಗುರುಗಳನ್ನು ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜೈರಾಮ್ ಅಡಿ, ದೇವಸ್ಥಾನದ ಟ್ರಸ್ಟಿ ಸತೀಶ್ ಶೆಟ್ಟಿ ಮತ್ತಿತರರು ಶ್ರೀ ಗಳನ್ನು ಬರಮಾಡಿಕೊಂಡರು. ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರು ಶ್ರೀಗಳನ್ನು ಬರಮಾಡಿಕೊಂಡರು. ಶ್ರೀ ಮುರುಡೇಶ್ವರ ದೇವರ ದರ್ಶನ ಪಡೆದ ಶ್ರೀಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮುರುಡೇಶ್ವರ ಗೋಪುರ ವೀಕ್ಷಣೆ ಮಾಡಿದ ಶ್ರೀಗಳು ಸಮುದ್ರ ತೀರಕ್ಕೆ ತೆರಳಿದರು. ಕೆಲದಿನಗಳ ಹಿಂದಷ್ಟೇ ನಿರ್ಮಿಸಿರುವ ತೇಲುವ ಸೇತುವೆ ಮೇಲೆ ನಡೆದು ಕೆಲಕಾಲ ಸಮಯ ಕಳೆದರು.
ನಂತರ ಧೇನು ಆತಿಥ್ಯ ಗೋ ಶಾಲೆಗೆ ಭೇಟಿ ನೀಡಿ ಅಲ್ಲಿರುವ ಗೋವುಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಗೋ ಸಂರಕ್ಷಣೆಗಾಗಿ 50,000 ರೂ. ದೇಣಿಗೆ ನೀಡಿದರು.